Kannada NewsKarnataka NewsLatestPolitics

ಪ್ರಜ್ವಲ್ ಸಂಸತ್ ಸದಸ್ಯತ್ವ ರದ್ದು; ಸುಪ್ರೀಂ ಕೋರ್ಟ್ ನಲ್ಲಿ ಕೇವಿಯಟ್

ಪ್ರಗತಿವಾಹಿನಿ ಸುದ್ದಿ, ಹಾಸನ: ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್ ತೀರ್ಪು ನೀಡಿದ ನಂತರ ಅವರು ಸುಪ್ರೀಂ ಕೋರ್ಟ್ ಗೆ ಹೋಗುವ ಸಾಧ್ಯತೆ ಇರುವುದರಿಂದ ಸುಪ್ರೀಂ ಕೋರ್ಟ್ ನಲ್ಲಿ ಕೇವಿಯಟ್ ಫೈಲ್ ಮಾಡಿದ್ದಾಗಿ ವಕೀಲ, ದೂರುದಾರ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ.

“ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಹೈಕೋರ್ಟ್‌ಗೆ ತೀರ್ಪು ಅಮಾನತಿಗೆ ಮೊರೆ ಹೋಗಿದ್ದಾರೆ. 30 ದಿನದೊಳಗೆ ಸುಪ್ರೀಂಕೋರ್ಟ್‌ಗೂ ಹೋಗಬಹುದು. ನಾವು ಕೇವಿಯೆಟ್ ಹಾಕಿರುವುದರಿಂದ ಸಂಸದರು ಎಂಟೇರ್ ನಮಗೆ ಪಿಟಿಷನ್ ನೀಡಬೇಕು. ಅದಕ್ಕೆ ತಕರಾರು ಹಾಕಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಸುಪ್ರೀಂಕೋರ್ಟ್ ನಲ್ಲೂ ನಮಗೆ ನ್ಯಾಯ ಸಿಗಲಿದೆ ಎಂದು ಭರವಸೆ ಇದೆ” ಎಂದರು.

“ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ಸಾಕಷ್ಟು ಆಮಿಷಗಳನ್ನು ಒಡ್ಡುವ ಪ್ರಯತ್ನಗಳು ನಡೆದವು. ಆದರೆ ಅದಕ್ಕೆ ಮಣಿಯಲಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಗೆ ನ್ಯಾಯ ದೊರಕಿದಂತಾಗಿದೆ. ಸದ್ಯ ಹೈಕೋರ್ಟ್‌ನಲ್ಲಿ ಗೆಲುವು ನಮ್ಮದಾಗಿದೆ. ಮುಂದೆ ತೀರ್ಪು ಏನಾದರೂ ಆಗಬಹುದು” ಎಂದು ದೇವರಾಜೇಗೌಡ ಹೇಳಿದರು.

Home add -Advt

Related Articles

Back to top button