
ಪ್ರಗತಿವಾಹಿನಿ ಸುದ್ದಿ: ದೇವಸ್ಥಾನದ ಉತ್ಸವದ ವೇಳೆ ಆನೆಗಳ ದಾಳಿಯಿಂದ ಸಂಭವಿಸಿದ ನೂಕು ನುಗ್ಗಲು, ಕಾಲ್ತುಳಿತ ಘಟನೆಯಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಕೇರಳದ ಕೊಯಿಲಾಂಡಿ ಬಳಿಯ ಮನಕುಲಂಗರ ದೇವಸ್ಥಾನದಲ್ಲಿ ನಡೆದಿದೆ.
ದೇವಸ್ಥಾನದ ಉತ್ಸವಕ್ಕೆಂದು ಆನೆಗಳನ್ನು ಕರೆತರಲಾಗಿತ್ತು. ಈ ವೇಳೆ ಕೆಲವರು ಪಟಾಕಿ ಸಿಡಿಸಿದ್ದಾರೆ. ಪಟಾಕಿ ಸದ್ದಿಗೆ ಗಾಬರಿಯಾದ ಆನೆಗಳು ದಿಕ್ಕಾಪಾಲಾಗಿ ಓಡಿವೆ. ಕಂಗಾಲಾದ ಭಕ್ತರು ಆನೆ ದಾಳಿಯಿಂದ ರಕ್ಷಸಿಕೊಳ್ಳಲು ಮುಂದಾದ ವೇಳೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.
ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ರೊಚ್ಚಿಗೆದ್ದ ಆನೆ ದೇವಸ್ಥಾನದ ಗೋಡೆಗೆ ಗುದ್ದಿದ ಪರಿಣಾಮ ಗೋಡೆಯ ಒಂದು ಭಾಗ ಕುಸಿದು ಬಿದ್ದಿದೆ.