Belagavi NewsBelgaum NewsKannada NewsKarnataka News

*ಖಾನಾಪುರದಲ್ಲಿ ಕಾಡಾನೆ ಪ್ರತ್ಯಕ್ಷ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಖಾನಾಪುರ ತಾಲೂಕಿನಲ್ಲಿ ಹಬ್ಬಾನಟ್ಟಿ ಗ್ರಾಮದಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು, ಐದು ದಿನಗಳಿಂದ ಬಿಡು ಬಿಟ್ಟಿದ್ದ ಆನೆಗಳನ್ನು ಗ್ರಾಮಸ್ಥರು ಮರಳಿ ಕಾಡಿಗೆ ಓಡಿಸಿದ್ದಾರೆ.

ಕಾಡಿಗೆ ಮರಳಲು ಸತಾಯಿಸುತ್ತಿದ್ದ ಕಾಡಾನೆಯನ್ನು ದಿನವಿಡೀ ಹಬ್ಬಾಹಟ್ಟಿ ಸಮೀಪದಲ್ಲಿಯೇ ಬೀಡು ಬಿಟ್ಟು ಆತಂಕ ಸೃಷ್ಟಿಸಿದ್ದವು. ಕಾಡಾನೆಗಳು ಹಗಲಲ್ಲೇ ಸಂಚರಿಸುತ್ತಿರುವುದರಿಂದ ಅಲ್ಲಿರುವ ಜನರಿಗೆ ಸಂಚರಿಸಲು, ಕೆಲಸ ಮಾಡಲು ಭಯಪಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು.

Home add -Advt

ಆದರೆ ಇದೀಗ ಗ್ರಾಮಸ್ಥರೇ ಸೇರಿ ಮರಳಿ ಕಾಡಿಗೆ ಓಡಿಸಿದ್ದಾರೆ. ಅಲ್ಲದೇ ಮತ್ತೆ ಆನೆಗಳು ಗ್ರಾಮದ ಹತ್ತಿರ ಬರದ ಹಾಗೇ ನೋಡಿಕೊಳ್ಳಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Related Articles

Back to top button