Latest

ಕಂಪನಿಯೊಂದು ನನ್ನ ವೀರ್ಯಾಣುಗಳನ್ನು ಕೇಳಿತ್ತು: ಎಲಾನ್ ಮಸ್ಕ್ ತಂದೆ

ಪ್ರಗತಿವಾಹಿನಿ ಸುದ್ದಿ, ಕೇಪ್ ಟೌನ್: “ಇನ್ನಷ್ಟು ಎಲಾನ್ ಮಸ್ಕ್ ಗಳನ್ನು ಹುಟ್ಟುಹಾಕುವ  ಉದ್ದೇಶದಿಂದ ಕಂಪನಿಯೊಂದು ನನ್ನ ವೀರ್ಯಾಣುಗಳನ್ನು ಕೇಳಿತ್ತು” ಎಂದು ಖ್ಯಾತ ಉದ್ಯಮಿ ಎಲಾನ್ ಮಸ್ಕ್ ತಂದೆ ಎರ್ರೊಲ್ ಮಸ್ಕ್  ಬಹಿರಂಗಪಡಿಸಿದ್ದಾರೆ.

“ಈ ಹಿಂದೆ  ಕೋಲಂಬಿಯಾದ  ಕಂಪನಿಯೊಂದು  ನನ್ನನ್ನು ಸಂಪರ್ಕಿಸಿ ವೀರ್ಯಾಣುಗಳನ್ನು ನೀಡುವಂತೆ ಕೇಳಿತ್ತು. ಮಕ್ಕಳಾಗದ ಮಹಿಳೆಯರಿಗೆ ವೀರ್ಯದಾನ ಮಾಡುವ ಮೂಲಕ ಅವರಿಂದ ಎಲಾನ್ ಮಸ್ಕ್ ತಳಿಯನ್ನೇ ಹುಟ್ಟುಹಾಕುವ ಉದ್ದೇಶ ಆ ಕಂಪನಿಯದಾಗಿತ್ತು ಎಂದು 76 ವರ್ಷದ ಎರ್ರೊಲ್ ಮಸ್ಕ್ ಹೇಳಿಕೊಂಡಿದ್ದಾರೆ. 

ಇದಕ್ಕಾಗಿ ಕಂಪನಿ ಅವರಿಗೆ ಹಣದ ಆಫರ್ ನೀಡಿರಲಿಲ್ಲವಂತೆ. ಬದಲಾಗಿ ಪ್ರಥಮ ದರ್ಜೆ ಪ್ರವಾಸ, ಫೈಸ್ಟಾರ್ ಹೋಟೆಲ್ ಗಳಲ್ಲಿ ವಸತಿಯಂಥ ಆಫರ್ ಗಳನ್ನು ನೀಡಿತ್ತು ಎಂದು ಎರ್ರೊಲ್ ಮಸ್ಕ್ ಹೇಳಿದ್ದಾರೆ.

ಕಾರಲ್ಲಿ ಕುಳಿತು ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಾಹುತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button