ಅಗತ್ಯ ಸೇವೆಗಳ ವಿವಿಧ ಇಲಾಖೆಗಳ ಸಿಬ್ಬಂದಿಗೆ ಮೇ 2ರಿಂದ 4 ರವರೆಗೆ ಅಂಚೆ ಮೂಲಕ ಮತದಾನಕ್ಕೆ ಅವಕಾಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳು ಎಂದು ಗುರುತಿಸಲಾದ ವಿವಿಧ ಇಲಾಖೆಗಳಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ನಮೂನೆ-12ಡಿ ರಲ್ಲಿ ಕೋರಿಕೆ ಸಲ್ಲಿಸಿದ ಅಧಿಕಾರಿ/ಸಿಬ್ಬಂದಿ ಪೋಸ್ಟಲ್ ವೋಟಿಂಗ್ ಸೆಂಟರ್ ಗಳನ್ನು ಮೇ 2 ರಿಂದ 4 2023 ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆಯಲಾಗಿದೆ.
ಅಗತ್ಯ ಸೇವೆಗಳು ಎಂದು ಗುರುತಿಸಲಾದ ವಿವಿಧ ಇಲಾಖೆಗಳು:
ಎಲೆಕ್ಟ್ರಿಸಿಟಿ ಇಲಾಖೆ, ಬಿಎಸ್‌ಎನ್‌ಎಲ್, ರೈಲ್ವೆ ಇಲಾಖೆ, ದೂರದರ್ಶನ, ಆಲ್ ಇಂಡಿಯಾ ರೆಡಿಯೋ, ಆರೋಗ್ಯ ಇಲಾಖೆ, ಎವಿಯೆಷನ್, ಸಾರಿಗೆ ಸಂಸ್ಥೆ, ಫೈರ್ ಸರ್ವಿಸಿಸ್, Media Persons authorized bb ECI for pollday Coverage, ಟ್ರಾಫಿಕ್ ಪೋಲಿಸ್ ಹಾಗೂ ಅಂಬುಲೆನ್ಸ್ ಸೇವೆಗಳು.
ಪೋಸ್ಟಲ್ ವೋಟಿಂಗ್ ಸೆಂಟರ್ ಗಳ ವಿಳಾಸ:
01 – ನಿಪ್ಪಾಣಿ: ತಹಶೀಲ್ದಾರ ಕಚೇರಿ ಐಬಿ ನಿಪ್ಪಾಣಿ
02-ಚಿಕ್ಕೋಡಿ-ಸದಲಗಾ: ಕೊಠಡಿ ನಂ:7 (ನೆಲ ಮಹಡಿ) ತಹಶೀಲ್ದಾರ ಕಚೇರಿ ಚಿಕ್ಕೋಡಿ
03- ಅಥಣಿ: ತಹಶೀಲ್ದಾರ ಕಚೇರಿ ಅಥಣಿ
04-ಕಾಗವಾಡ: ಚುನಾವಣಾಧಿಕಾರಿಗಳ ಕಚೇರಿ ಶಿವಾನಂದ ಕಾಲೇಜ್, ಕಾಗವಾಡ
05-ಕುಡಚಿ: ಚುನಾವಣಾಧಿಕಾರಿಗಳ ಕಚೇರಿ 05-ಕುಡಚಿ ವಿಧಾನಸಭೆ ಕ್ಷೇತ್ರ, ತಹಶೀಲ್ದಾರ ಕಾರ್ಯಾಲಯ ರಾಯಬಾಗ
06-ರಾಯಬಾಗ: ಚುನಾವಣಾಧಿಕಾರಿಗಳ ಕಚೇರಿ 06-ರಾಯಬಾಗ ವಿಧಾನಸಭೆ ಕ್ಷೇತ್ರ, ತಹಶೀಲ್ದಾರ ಕಾರ್ಯಾಲಯ ರಾಯಬಾಗ
07-ಹುಕ್ಕೇರಿ: ತಹಶೀಲ್ದಾರ ಕಚೇರಿ ಹುಕ್ಕೇರಿ
08-ಅರಬಾವಿ: ತಹಶೀಲ್ದಾರ ಕಚೇರಿ, ಮೂಡಲಗಿ
09-ಗೋಕಾಕ: ತಾಲೂಕಾ ಆಡಳಿತ ಸೌಧ ರೂಮ್ ನಂ:23 ತಹಶೀಲ್ದಾರ ಕಚೇರಿ ಗೋಕಾಕ
10-ಯಮಕನಮರಡಿ: ಸಹಾಯಕ ನಿರ್ದೇಶಕರು ಸಾಮಾಜಿಕ ಕಲ್ಯಾಣ ಕಚೇರಿ ಹೊಸ ಕಟ್ಟಡ ನೆಲ ಮಹಡಿ ಹುಕ್ಕೇರಿ
11-ಬೆಳಗಾವಿ ಉತ್ತರ: ಚುನಾವಣಾಧಿಕಾರಿಗಳ ಕಚೇರಿ, 11-ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರ, ಮಹಾನಗರ ಪಾಲಿಕೆ ಕಚೇರಿ ಸುಭಾಷ ನಗರ ಬೆಳಗಾವಿ
12-ಬೆಳಗಾವಿ ದಕ್ಷಿಣ: ಚುನಾವಣಾಧಿಕಾರಿಗಳ ಕಚೇರಿ, 11-ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರ, ಮಹಾನಗರ ಪಾಲಿಕೆ ಕಚೇರಿ ಸುಭಾಷ ನಗರ ಬೆಳಗಾವಿ
13-ಬೆಳಗಾವಿ ಗ್ರಾಮೀಣ: ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಕಂಗ್ರಾಳಿ ಕೆ.ಎಚ್
14-ಖಾನಾಪುರ: ತಹಶೀಲ್ದಾರ ಕಚೇರಿ, ಖಾನಾಪುರ
15-ಕಿತ್ತೂರು: ರೂಮ್ ನಂ: 14 ತಹಶೀಲ್ದಾರ ಕಚೇರಿ ಕಿತ್ತೂರು
16- ಬೈಲಹೊಂಗಲ: ತಹಶೀಲ್ದಾರ ಕಚೇರಿ, ಬೈಲಹೊಂಗಲ
17-ಸವದತ್ತಿ-ಯಲ್ಲಮ್ಮಾ: ಸರ್ವೇ ಸೆಕ್ಷನ್ ತಹಶೀಲ್ದಾರ ಕಚೇರಿ, ಸವದತ್ತಿ
18-ರಾಮದುರ್ಗ : ರೂಮ್ ನಂ.06 ತಹಶೀಲ್ದಾರ ಕಚೇರಿ, ರಾಮದುರ್ಗ
ಈ ಇಲಾಖೆಗಳಡಿ ಬರುವ ನಮೂನೆ-12ಡಿ ರಲ್ಲಿ ಕೋರಿಕೆ ಸಲ್ಲಿಸಿದ ಅಧಿಕಾರಿ/ ಸಿಬ್ಬಂದಿಗಳು ಪೋಸ್ಟಲ್ ವೋಟಿಂಗ್ ಸೆಂಟರ್ (Pಗಿಅ) ಗಳಿಗೆ ಭೇಟಿ ನೀಡಿ ಮತದಾನ ಮಾಡಬಹುದಾಗಿದೆ. ಮತದಾನ ಮಾಡಲು ತೆರಳಿದ ದಿನಕ್ಕೆ ಮಾತ್ರ ವೇತನ ಸಹಿತ ರಜೆಯನ್ನು ನೀಡಲಾಗುವುದು. ಕಾರಣ ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಸಂಬAಧಿಸಿದ ಅಧಿಕಾರಿ/ ಸಿಬ್ಬಂದಿಗಳು ಈ ಸಂದರ್ಭವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ