ಪ್ರಗತಿ ವಾಹಿನಿ ಸುದ್ದಿ,, ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆಯಿಂದ ಆರಂಭಗೊಂಡು ಗಾಂಧಿ ಜಯಂತಿಯವರೆಗೆ ಬಿಜೆಪಿಯಿಂದ ಹಮ್ಮಿಕೊಂಡಿರುವ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ, ಬಿಜೆಪಿ ಗ್ರಾಮೀಣ ಮಹಿಳಾ ಘಟಕದ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಮತ್ತು ಕಾರ್ಯಕರ್ತರು ಖಾನಾಪುರ ತಾಲೂಕಿನ ಡುಕ್ಕರವಾಡಿ ಗ್ರಾಮದ ಕುಂಬಾರಿಕೆ ವೃತ್ತಿಯ ಪುಂಡಲೀಕ ಕುಂಬಾರ ಅವರ ಮನೆಗೆ ಭೇಟಿ ನೀಡಿದರು.
ವಿಶೇಷ ಚೇತನರಾಗಿರುವ ಪುಂಡಲೀಕ ಅವರು ಕುಂಬಾರಿಕೆ ಉದ್ಯಮ ನಡೆಸುತ್ತ ಸ್ಥಳೀಯ ಹಳ್ಳಿಗರು ಮತ್ತು ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಅವರು ಅತ್ಯುತ್ತಮ ಗುಣಮಟ್ಟದ ಮಣ್ಣಿನ ಕಲಾಕೃತಿಗಳು, ಮೂರ್ತಿಗಳನ್ನು ತಯಾರಿಸುತ್ತಾರೆ. ಪ್ರತಿಯೊಬ್ಬರೂ ಇಲ್ಲಿಗೆ ಭೇಟಿ ನೀಡಿ ಗ್ರಾಮೀಣ ಉದ್ಯಮವನ್ನು ಪ್ರೋತ್ಸಾಹಿಸಬೇಕು ಎಂದು ಡಾ. ಸೋನಾಲಿ ಸರ್ನೋಬತ್ ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ ಕಡೆಮನಿ, ಬಾಳೇಶ ಚವ್ವನ್ನವರ್, ಪರಶುರಾಮ ಕೋಲ್ಕಾರ್, ಕುಶ್ ಅಂಬೋಜಿ, ಕಲ್ಲಪ್ಪಾ ಕಂಗ್ರಾಳಕರ್, ವೈಷ್ಣವಿ ಬೋಸ್ಲೆ, ದೀಪಕ್ ಚೌಗುಲೆ, ಶಶಿಕಾಂತ ನಾಯ್ಕ, ನಾಗೇಶ ರಾಮ್ಜಿ, ವಿನಾಯಕ ನಾಯ್ಕ, ವಿನೋದ ಪಾವಲೆ ಮೊದಲಾದವರು ಇದ್ದರು.
ಪುಂಡಲೀಕ ಕುಂಬಾರ ಅವರನ್ನು ಮೊ. 7411279542 ಸಂಖ್ಯೆ ಮೂಲಕ ಸಂಪರ್ಕಿಸಬಹುದು ಎಂದು ಡಾ. ಸೋನಾಲಿ ಸರ್ನೋಬತ್ ತಿಳಿಸಿದ್ದಾರೆ.
https://pragati.taskdun.com/latest/will-dussehra-vacation-of-schools-be-extended-to-one-month/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ