Latest

ಲಕ್ಷಿ ಹೆಬ್ಬಾಳಕರ್ ಪುತ್ರ ಮೃಣಾಲ್ ವಿವಾಹ ನಿಶ್ಚಿತಾರ್ಥ

ಪ್ರಗತಿವಾಹಿನಿ ಸುದ್ದಿ, ಭದ್ರಾವತಿ – ಕಾಂಗ್ರೆಸ್ ಪ್ರಭಾವಿ ನಾಯಕಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪುತ್ರ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೃಣಾಲ್ ಮತ್ತು ಭದ್ರಾವತಿ ಶಾಸಕ ಬಿ.ಕೆ.ಶಂಗಮೇಶ್ ಅವರ ಸಹೋದರ ಬಿ.ಕೆ.ಶಿವಕುಮಾರ ಪುತ್ರಿ ಡಾ.ಹಿತಾ ವಿವಾಹ ನಿಶ್ಚಿತಾರ್ಥ ಕೊನೆಯ ಶ್ರಾವಣ ಸೋಮವಾರ ಶಿವಮೊಗ್ಗದಲ್ಲಿ ಸಂಭ್ರಮದಿಂದ ನಡೆಯಿತು.

ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಗಣ್ಯರ ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡರು.

ಈ ವೇಳೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಹಿತಾ ನಮ್ಮ ಮನೆಗೆ ಸೊಸೆಯಲ್ಲ, ಮಗಳಾಗಿ ಬರುತ್ತಿದ್ದಾಳೆ. ಸಂಗಮೇಶ ಕುಟುಂಬದೊಂದಿಗೆ ನೆಂಟಸ್ತನ ನಮಗೆ ಖುಷಿ ತಂದಿದೆ ಎಂದರು.

 ಶಾಸಕ ಸಂಗಮೇಶ್ ಕೂಡ ಸಂತಸ ಹಂಚಿಕೊಂಡರು.  ಬೆಳಗಾವಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನಂತೆ ಲಕ್ಷ್ಮಿ ಹೆಬ್ಬಾಳಕರ್ ಕೆಲಸ ಮಾಡುತ್ತಿದ್ದಾರೆ. ಅಂತವರದೊಂದಿಗೆ ನಮ್ಮ ಸಂಬಂಧ ಕೂಡಿ ಬಂದಿರುವುದು ಸಂತಸ ತಂದಿದೆ ಎಂದರು.

Home add -Advt

ನವೆಂಬರ್ ತಿಂಗಳಲ್ಲಿ ಇವರಿಬ್ಬರ ಮದುವೆ ನೆರವೇರಿಸಲು ನಿಶ್ಚಯಿಸಲಾಗಿದೆ.

ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ರಘು, ಶಾಸಕ ಮಂಜುನಾಥ ಅಲಗೂರು,  ಮಾಜಿ ಸಚಿವ ಕಿಮ್ಮನೆ ರತ್ನಾಕರ, ವಿನಯ ಗುರೂಜಿ ಮೊದಲಾದವರು ಪಾಲ್ಗೊಂಡು ಶುಭ ಹಾರೈಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button