Kannada NewsKarnataka NewsLatest

*ಸ್ನೇಹಿತನ ಮನೆಗೆ ಬಂದಾಗಲೇ ದುರಂತ: ಈಜಲು ಹೋದ ಇಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಗೆಳೆಯನ ಮನೆಗೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನದಿಯಲ್ಲಿ ಈಜಲು ಹೋಗಿ ದುರಂತ ಅಂತ್ಯಕಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪಾಂಡವರ ಹೊಳೆಯಲ್ಲಿ ನಡೆದಿದೆ.

ದಯೊಬೈ ಮಿಡಿಕಾರ್ (22) ಮೃತ ವಿದ್ಯಾರ್ಥಿ. ಮಂಗಳೂರಿನ ಬಂಟ್ವಾಳದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ. ಹೊನ್ನೆಗದ್ದೆಯಲ್ಲಿರುವ ತನ್ನ ಗೆಳೆಯ ಚಿರಾಗ ಮನೆಗೆ ಬಂದು ಪಾಂಡವರ ಹೊಳೆಯಲ್ಲಿ ಈಜಾಡಲು ಹೋದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

Home add -Advt

ಡಿವೈಎಸ್ ಪಿ ಗಣೇಶ ಕೆ ಎಲ್ ಸೂಚನೆ ಮೇರೆಗೆ ಗ್ರಾಮೀಣ ಠಾಣೆ ಸಿಪಿಐ ಸೀತಾರಾಮ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.


Related Articles

Back to top button