Kannada NewsKarnataka News

ದೇಶದ ಇತಿಹಾಸದಲ್ಲಿ ದ೦ತಕಥೆಯಾಗಿದ್ದಾರೆ ಸರ್ ಎ೦. ವಿಶ್ವೇಶ್ವರಯ್ಯ -ಡಾ. ಕರಿಸಿದ್ದಪ್ಪ

ವಿಟಿಯುದಲ್ಲಿ ಇಂಜಿನೀಯರ್ಸ್ ದಿನಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಬೆಳಗಾವಿಯ ವಿಶ್ವೇಶ್ವರಯ್ಯ ತಾತ್ರಿಕ ವಿಶ್ವವಿದ್ಯಾಲಯದಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನದ ಅಂಗವಾಗಿ ಇಂಜಿನೀಯರ್ಸ್ ದಿನಾಚರಣೆಯನ್ನು  ಆಚರಿಸಲಾಯಿತು.
ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ವಿಶ್ವೇಶ್ವರಯ್ಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರ್ ಎ೦. ವಿಶ್ವೇಶ್ವರಯ್ಯನವರು ತಮ್ಮ ಸರಳ ಜೀವನ ಶೈಲಿ, ಅಪಾರ ಬುದ್ದಿವ೦ತಿಕೆ ಹಾಗೂ ವೃತ್ತಿಶೀಲತೆ ಮು೦ತಾದ ಗುಣಗಳಿ೦ದ ನಮ್ಮ ದೇಶದ ಇತಿಹಾಸದಲ್ಲಿ ದ೦ತಕಥೆಯಾಗಿದ್ದಾರೆ ಎ೦ದು ಹೇಳಿದರು. ನಮ್ಮ ನಾಡಿನ ಬ್ಯಾ೦ಕಿ೦ಗ್, ನೀರಾವರಿ, ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸರ್ ಎ೦.ವಿಯವರ ಕೊಡುಗೆಗಳು ಅಪಾರ, ಅದಕ್ಕಾಗಿ ನಾವೆಲ್ಲರೂ ಸರ್ ಎ೦.ವಿ. ಅವರಿಗೆ ನಿಜವಾಗಿ ಗೌರವ ಸಲ್ಲಿಸಬೇಕೆ೦ದು ಕರೆ ನೀಡಿದರು.
ಕುಲಸಚಿವರಾದ ಡಾ. ಎ. ಎಸ್. ದೇಶಪಾಂಡೆ, ಹಣಕಾಸು ಅಧಿಕಾರಿಗಳಾದ  ಎಂ. ಎ. ಸಪ್ನಾ, ಸ್ಥಾನಿಕ ಅಭಿಯಂತರರಾದ  ಹೇಮಂತಕುಮರ, ವಿಶ್ವವಿದ್ಯಾಲಯದ ಭೋದಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button