Latest

ಅಂತೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

ಅಂತೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಬಿಜೆಪಿ ಸರಕಾರ ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದೆ. ಇದರಿಂದಾಗಿ ಬಹಳ ದಿನಗಳಿಂದ ಇದ್ದ ಕುತೂಹಕ್ಕೆ ತೆರೆ ಬಿದ್ದಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಲಬುರ್ಗಿ ಮತ್ತು ಬಾಗಲಕೋಟೆಗೆ ಉಸ್ತುವಾರಿಯಾಗಲಿದ್ದಾರೆ. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ರಾಮನಗರ ಹಾಗೂ ಚಿಕ್ಕಬಳ್ಳಾಪುರ ಉಸ್ತುವಾರಿ, ಇನ್ನೋರ್ವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಳ್ಳಾರಿ ಹಗೂ ಕೊಪ್ಪಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಹಾಗೂ ದಾವಣಗೆರೆ, ಆರ್.ಅಶೋಕ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ,  ಜಗದೀಶ ಶೆಟ್ಟರ್ ಬೆಳಗಾವಿ ಹಾಗೂ ಹುಬ್ಬಳ್ಳಿ -ಧಾರವಾಡ, ಶ್ರೀರಾಮುಲು ರಾಯಚೂರು, ಚಿತ್ರದುರ್ಗ, ಎಸ್.ಸುರೇಶ ಕುಮಾರ ಚಾಮರಾಜನಗರ, ವಿ.ಸೋಮಣ್ಣ ಮೈಸೂರು, ಮಡಿಕೇರಿ, ಸಿ.ಟಿ.ರವಿ ಚಿಕ್ಕಮಗಳೂರು, ಬಸವರಾಜ ಬೊಮ್ಮಾಯಿ ಉಡುಪಿ, ಹಾವೇರಿ, ಕೋಟ ಶ್ರೀನಿವಾಸ ಪೂಜಾರಿ ಮಂಗಳೂರು, ಜೆ.ಸಿ.ಮಾಧುಸ್ವಾಮಿ ತುಮಕೂರು, ಹಾಸನ, ಸಿ.ಸಿ.ಪಾಟೀಲ ಗದಗ, ವಿಜಯಪುರ, ಎಚ್.ನಾಗೇಶ ಕೋಲಾರ, ಪ್ರಭು ಚವ್ಹಾಣ ಬೀದರ್, ಯಾದಗಿರಿ, ಶಶಿಕಲಾ ಜೊಲ್ಲೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ.

Related Articles

Back to top button