ಪುನೀತ್ ಜೊತೆ ಅಭಿನಯಿಸಿದ್ದ ನಟಿ ಬಿಚ್ಚಿಟ್ಟ ಕಹಿ ಅನುಭವ !

ಪ್ರಗತಿ ವಾಹಿನಿ ಸುದ್ದಿ ಮುಂಬೈ – ಖ್ಯಾತ ಹಿಂದಿ ಕಿರುತೆರೆ ನಟಿ ಎರಿಕಾ ಫರ್ನಾಂಡಿಸ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವವನ್ನು ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.

ಎರಿಕಾ ಪ್ರಸ್ತುತ ಟಿವಿ ವಾಹಿನಿಗಳಲ್ಲಿ ಖ್ಯಾತರಾಗಿದ್ದಾರೆ. ಇದಕ್ಕೂ ಮೊದಲು ಅವರು ಪುನೀತ್ ರಾಜ್‌ಕುಮಾರ್‌ರ ಪ್ರಸಿದ್ಧ ಚಿತ್ರ ನಿನ್ನಿಂದಲೇ ಸೇರಿದಂತೆ ಹಲವು ದಕ್ಷಿಣ ಭಾರತದ ಚಿತ್ರಗಳಲ್ಲಿ ಅಭಿನಯಿಸಿದ್ದರು.

ತೆಳ್ಳನೆಯ ದೇಹ ಹೊಂದಿರುವ ಎರಿಕಾ ದಕ್ಷಿಣದ ಚಿತ್ರಗಳಲ್ಲಿ ಅಭಿನಯಿಸುವಾಗ ದೇಹದ ಆಕೃತಿಯ ಕಾರಣಕ್ಕೆ ಅನೇಕ ಬಾರಿ ಮುಜುಗರ ಅನುಭವಿಸಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ದಕಿಣದ ಚಿತ್ರರಂಗದಲ್ಲಿ ನನ್ನ ತೆಳ್ಳನೇಯ ದೇಹವನ್ನು ತೆರೆಯ ಮೇಲೆ ತೋರಿಸಲು ಯಾರೂ ಇಷ್ಟಪಡುತ್ತಿರಲಿಲ್ಲ. ಹಾಗಾ ದೇಹವನ್ನು ದಷ್ಟಪುಷ್ಟವಾಗಿ ಕಾಣುವಂತೆ ಮಾಡಲು ಪ್ಯಾಡಿಂಗ್ ಅಳವಡಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ನಾನು ನನ್ನ ದೇಹದ ಕಾರಣಕ್ಕೆ ಕುಗ್ಗಿಹೋಗುತ್ತಿದ್ದೆ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ಎರಿಕಾ ೨೦೧೪ರಲ್ಲಿ ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್ ಅಭಿನಯದ ನಿನ್ನಿಂದಲೇ ಸೇರಿದಂತೆ ಆ ಅವಧಿಯಲ್ಲಿ ಬಿಡುಗಡೆಯಾದ ಕೆಲ ದಕ್ಷಿಣ ಭಾರತದ ಚಿತ್ರಗಳಲ್ಲಿ ಅಭಿನಯಿಸಿದ್ದು, ಅವರು ಆ ಅವಧಿಯಲ್ಲಿ ದಕ್ಷಿಣ ಭಾರತದ ಚಿತ್ರರಂಗ ನಾಯಕಿ ಅಥವಾ ಸ್ತ್ರೀ ಪಾತ್ರವನ್ನು ಜನ ಆ ರೀತಿಯಲ್ಲೇ ನೋಡಲು ಇಷ್ಟಪಡುತ್ತಿದ್ದರು, ಹಾಗಾಗಿ ನಿರ್ದೇಶಕರು ನನ್ನನ್ನು ದಷ್ಟಪುಷ್ಟವಾಗಿ ತೋರಿಸುವುದು ಅನಿವಾರ್ಯವಾಗಿತ್ತು, ಆದರೆ ಈಗ ಕಾಲ ಬದಲಾಗಿದೆ. ನಟನೆಗೆ ಹೆಚ್ಚು ಪ್ರಾಮುಖ್ಯತೆ ದೊರಕುತ್ತಿದೆ. ದೇಹದ ಆಕೃತಿಯ ವಿಚಾರ ಮೊದಲಿನಷ್ಟು ಪ್ರಸ್ತುತವಾಗಿಲ್ಲ ಎಂದಿದ್ದಾರೆ.

ಇನ್ನು ಚಲನ ಚಿತ್ರದಿಂದ ಟಿವಿಯೆಡೆಗೆ ತೆರಳಿರುವ ಬಗ್ಗೆ ೨೮ ವರ್ಷದ ನಟಿ ಮಾತನಾಡಿದ್ದು, ಚಲನಚಿತ್ರ ಮತ್ತು ಟಿವಿ ನಡುವೆ ನನಗೆ ಏನೂ ವ್ಯತ್ಯಾಸ ಎನಿಸಿಲ್ಲ. ಕೆಲಸ ಎಂದರೆ ಕೆಲಸ ಅಷ್ಟೇ, ಅದು ಟಿವಿಯಾಗಲಿ ಚಲನ ಚಿತ್ರವಾಗಲಿ ನಾನು ಕೇವಲ ಕೆಲಸವನ್ನು ಇಟಪಡುತ್ತೇನೆ ಎಂದಿದ್ದಾರೆ.

ಹಿಂದಿ ಟಿವಿ ಸೀರಿಯಲ್ ಕುಚ್ ರಂಗ್ ಪ್ಯಾರ್‌ಕೆ ಐಸೇಭಿ ಇಂದ ಖ್ಯಾತಿ ಪಡೆದರು. ಕಸೂತಿ ಜಿಂದಗೀಕೆ ಯ ಹೊಸ ಸೀಸನ್‌ನಲ್ಲಿ ಕಾಣಿಸಿಕೊಂಡ ಅವರು ಸ್ಟಾರ್ ಪ್ಲಸ್‌ನ ಪ್ರೇರಣಾದ ಅಭಿನಯದಲ್ಲೂ ಮೆಚ್ಚುಗೆ ಪಡೆದಿದ್ದಾರೆ.

ಕಿರೀಟಿ ರೆಡ್ಡಿ ಇಂಟ್ರೋಡಕ್ಷನ್ ಟೀಸರ್ ರಿಲೀಸ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button