Kannada NewsLatestWorld

*ಇಥಿಯೋಪಿಯನ್ ಏರ್ ಲೈನ್ಸ್ 737 MAX ಅಪಘಾತದಲ್ಲಿ ಸಾವನ್ನಪ್ಪಿದ ಭಾರತೀಯ ಮಹಿಳೆ ಕುಟುಂಬಕ್ಕೆ 318 ಕೋಟಿ ಪರಿಹಾರ ನೀಡಲು ಆದೇಶ*

ಪ್ರಗತಿವಾಹಿನಿ ಸುದ್ದಿ: 2019ರ 737 ಮ್ಯಾಕ್ಸ್ ಅಪಘಾತದಲ್ಲಿ ಮೃತಪಟ್ಟ ಭಾರತೀಯ ಮಹಿಳೆಯ ಕುಟುಂಬಕ್ಕೆ 318 ಕೋಟಿ ಪರಿಹಾರ ನೀಡಲು ಬೋಯಿಂಗ್ ನಿರ್ಧರಿಸಿದೆ.

2019ರ ಇಥಿಯೋಪಿಯನ್ ಏರ್ ಲೈನ್ಸ್ 737 MAX ಅಪಘಾತದಲ್ಲಿ ವಿಶ್ವಸಂಸ್ಥೆಯ ಸಲಹಾಗಾರರಾಗಿದ್ದ ದೆಹಲಿ ಮೂಲದ ಶಿಖಾ ಗಾರ್ಗ್ ಸಾವನ್ನಪ್ಪಿದ್ದರು. ಅವರ ಕುಟುಂಬಕ್ಕೆ ಬೋಯಿಂಗ್ $35.85 ಮಿಲಿಯನ್ (318 ಕೋಟಿ) ಪಾವತಿಸಲು ಆದೇಶಿಸಲಾಗಿದೆ.

ಪಾವತಿಯು $28ಮಿಲಿಯನ್ ತೀರ್ಪು ಮೊತ್ತ ಮತ್ತು 26% ಬಡ್ಡಿ ಮತ್ತು ಶಿಖಾ ಗಾರ್ಗ್ ಅವರ ಪತಿಗೆ $3.45ಮಿಲಿಯನ್ ನ್ನು ಒಳಗೊಂಡಿದೆ. 157 ಜನರನ್ನು ಬಲಿತೆಗೆದುಕೊಂಡಿದ್ದ ದುರಂತಕ್ಕೆ ಸಂಬಂಧಿಸಿದ ಮೊದಲ ಸಿವಿಲ್ ವಿಚಾರಣೆ ಇದಾಗಿದೆ.

Home add -Advt

Related Articles

Back to top button