LatestUncategorized

*ಮೈಲಾರಿ ಹೋಟೆಲ್ ನಲ್ಲಿ ಸ್ವತ: ದೋಸೆ ತಯಾರಿಸಿದ ಪ್ರಿಯಾಂಕಾ ಗಾಂಧಿ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ವಿಧಾನಸಭಾ ಚುನಾವಣ ಅಖಾಡ ಕ್ಷಣ ಕ್ಷಣಕ್ಕೂ ರಂಗೇರುತ್ತಿದ್ದು,ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಕೇಂದ್ರ ನಾಯಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನಿನ್ನೆಯಿಂದ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಇಂದು ಮೈಸೂರಿನ ಹೋಟೆಲ್ ಒಂದರಲ್ಲಿ ದೋಸೆ ಹಾಕಿ ಗಮನ ಸೆಳೆದಿದ್ದಾರೆ.

ಮೈಸೂರಿನ ಮೈಲಾರಿ ಹೋಟೆಲ್ ನಲ್ಲಿ ಬೆಳಿಗ್ಗೆ ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ಉಪಹಾರ ಸವಿದಿದ್ದಾರೆ. ದೋಸೆ, ಇಡ್ಲಿ-ಛಟ್ನಿಯನ್ನು ಸವಿದ ಪ್ರಿಯಾಂಕಾ ಗಾಂಧಿ ಕೆಲ ಕಾಲ ಹೋಟೆಲ್ ಸಿಬ್ಬಂದಿಗಳ ಜೊತೆ ಆತ್ಮೀಯವಾಗಿ ಕಳೆದರು.

Home add -Advt

ಇದೇ ವೇಳೆ ಹೋಟೆಲ್ ಅಡುಗೆ ಮನೆಗೆ ತೆರಳಿದ ಪ್ರಿಯಾಂಕಾ ಗಾಂಧಿ ಸ್ವತ: ದೋಸೆ ಹಾಕಿ ತಯಾರಿಸಿದ್ದು ವಿಶೇಷವಾಗಿತ್ತು. ಪ್ರಿಯಾಂಕಾ ಗಾಂಧಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಣದೀಪ್ ಸುರ್ಜೇವಾಲ ಸಾಥ್ ನೀಡಿದರು.

https://pragati.taskdun.com/d-b-inamadardeathsiddaramaiahbelagavi/


Related Articles

Back to top button