13 ವರ್ಷದ ಬಾಲಕನಿಗೆ ಅಶ್ಲೀಲ ಮೆಸೇಜ್ : ಫೇಸ್‌ಬುಕ್‌ ಮಾಜಿ ಅಧಿಕಾರಿ ಬಂಧನ

ಪ್ರಗತಿ ವಾಹಿನಿ ಸುದ್ದಿ, ನ್ಯೂಯಾರ್ಕ್ –  ಫೇಸ್‌ಬುಕ್, ಇನ್ಸ್ಟಾಗ್ರಾಂನ ಮಾತೃ ಸಂಸ್ಥೆ ಮೆಟಾದ ಮಾಜಿ ಹಿರಿಯ ಅಧಿಕಾರೊಯೊಬ್ಬರು ೧೩ ವರ್ಷದ ಬಾಲಕನಿಗೆ ಸೆಕ್ಸ್ ವಿಡಿಯೋ ಮತ್ತು ಅಶ್ಲೀಲ ಸಂಭಾಷಣೆಯನ್ನು ಪೋಸ್ಟ್ ಮಾಡುತ್ತಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದಾರೆ.

ಮೆಟಾದಲ್ಲಿ ಸಮುದಾಯ ಅಭಿವೃದ್ಧಿ ವಿಭಾಗದ ೩೫ ವರ್ಷದ ಅಧಿಕಾರಿ ಈ ಕುಕೃತ್ಯ ಎಸಗುತ್ತಿದ್ದವರು. ಕಾನೂನಿನ ಕಾರಣಗಳಿಗಾಗಿ ವ್ಯಕ್ತಿಯ ಹೆಸರು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೇ ಆರೋಪಿಯು ಬಾಲಕನನ್ನು ತಾನು ಉಳಿದುಕೊಂಡ ಹೊಟೇಲ್ ರೂಮಿಗೂ ಬರಲು ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಇದನ್ನು ಆರೋಪಿಯು ನಿರಾಕರಿಸಿದ್ದು ತಾನು ಬಾಲಕನೊಂದಿಗೆ ಫ್ಲರ್ಟ್ ಮಾಡುತ್ತಿದ್ದರೂ ಆತನನ್ನು ಭೇಟಿಯಾಗುವ ಉದ್ದೇಶ ಇರಲಿಲ್ಲ ಎಂದಿದ್ದಾರೆ.

ಪೊಲೀಸರು ಎರಡು ಗಂಟೆಗೂ ಹೆಚ್ಚು ಕಾಲ ಆರೋಪಿಯ ವಿಚಾರಣೆ ನಡೆಸಿದ್ದಾರೆ. ಪೊಲೀಸರು ವಶಕ್ಕೆ ಪಡೆಯುವ ಮೊದಲೇ ಆರೋಪಿ ಬಾಲಕನಿಗೆ ಮಾಡಿದ ಮೆಸೇಜ್‌ಗಳನ್ನು ಡಿಲೀಟ್ ಮಾಡಿದ್ದರೂ ಪೊಲೀಸರು ಸಂಸ್ಥೆಯ ಮೂಲಗಳಿಂದ ಮಾಹಿತಿ ಕಲೆಹಾಕಿದ್ದಾರೆ.

Home add -Advt

ಆರೋಪಿಯನ್ನು ಸಂಸ್ಥೆಯಿಂದ ವಜಾಗೊಳಿಸಲಾಗಿದೆ ಎಂದು ಮೆಟಾದ ವಕ್ತಾರ ರು ಹೇಳಿಕೆ ನೀಡಿದ್ದಾರೆ.

ಸಸ್ಪೆಂಡ್ ಆಗಿದ್ದ ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button