ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಸ್. ಪೂಜಾರಿ (89) ನಿಧನರಾದರು.
1980 ರಿಂದ 2004 ರ ನಡುವೆ ಪರಿಷತ್ತಿನ ಸದಸ್ಯರಾಗಿದ್ದ ಅವಧಿಯಲ್ಲಿ ಅವರು ಶಿಕ್ಷಕರ ಕುಂದುಕೊರತೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಿಕ್ಷಕ ಬಂಧುತ್ವದೊಂದಿಗೆ ನಿಜವಾದ ಗಾಂಧಿವಾದಿಯಾಗಿ ಸೇವೆ ಸಲ್ಲಿಸಿದ್ದರು. ಅವರು ತಮ್ಮ ವಿದ್ಯಾರ್ಥಿಗಳ ಪಾಲಿಗೆ ಆತ್ಮೀಯ “ಪೂಜಾರಿ ಸರ್” ಆಗಿದ್ದರು.
ಅವರು ಪತ್ನಿ ದಮಯಂತಿ, ಪುತ್ರ ಡಾ. ಸಿದ್ಧಾರ್ಥ್ ಪೂಜಾರಿ ಮತ್ತು ಪುತ್ರಿ ಶ್ರದ್ಧಾ ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ.
ಅವರ ಅಂತ್ಯಕ್ರಿಯೆ ಭಾನುವಾರ ಸಂಜೆ ಬೆಳಗಾವಿ ಸದಾಶಿವನಗರದ ಲಿಂಗಾಯತ ಸ್ಮಶಾನ ಭೂಮಿಯಲ್ಲಿ ನಡೆಯಿತು. ಹಲವು ಗಣ್ಯರು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಪಸ್ ಫಂಡ್ ನಿಂದ ಶೇ.50 ರಷ್ಟು ವಿನಿಯೋಗಿಸಿದ ಸೆಲ್ಫ್ ರಿಲಾಯಂಟ್ ಇಂಡಿಯಾ (ಎಸ್ಆರ್ ಐ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ