Latest

BJPಗೆ ಗುಡ್ ಬೈ ಹೇಳಿದ ಮಾಜಿ ಶಾಸಕ ಯು.ಬಿ.ಬಣಕಾರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಶಾಸಕ, ಬಿಜೆಪಿ ಹಿರಿಯ ನಾಯಕ ಯು.ಬಿ.ಬಣಕಾರ್ ಬಿಜೆಪಿಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಆಪ್ತರಾಗಿದ್ದ ಯು.ಬಿ.ಬಣಕಾರ್, ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಹಿರೆಕೇರೂರು ರಾಜಕೀಯ ಬೆಳವಣಿಗೆಯಿಂದ ಬೇಸರಗೊಂಡು ಯು.ಬಿ.ಬಣಕಾರ್ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ.

ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನ, ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೂ ಬಣಕಾರ್ ರಾಜೀನಾಮೆ ನೀಡಿದ್ದಾರೆ. 1994ರಲ್ಲಿ ಬಿಜೆಪಿ ಹಾಗೂ 2013ರಲ್ಲಿ ಕೆಜೆಪಿಯಿಂದ ಎರಡು ಬಾರಿ ಹಿರೆಕೇರೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು.

ನಿನ್ನೆ ನಡೆದಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿಯೂ ಪಾಲ್ಗೊಂಡಿದ್ದ ಯು,ಬಿ.ಬಣಕಾರ್ ಇಂದು ಏಕಾಏಕಿ ಪಕ್ಷಕ್ಕೆ ರಾಜೀನಾಮೆ ನಿಡಿದ್ದಾರೆ. ನವೆಂಬರ್ 11ರಂದು ಬೆಂಬಲಿಗರ ಜೊತೆ ಸಭೆ ನಡೆಸಿ ಮುಂದಿನ ರಾಜಕೀಯ ನಡೆ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

Home add -Advt

ಹಿಂದೂಗಳು ಎದ್ದುನಿಂತರೆ ನಿಮ್ಮ ಹೆಸರು ಹೇಳಲು ಇರಲ್ಲ; ಸತೀಶ್ ಜಾರಕಿಹೊಳಿಗೆ ನಟ ಜಗ್ಗೇಶ್ ಎಚ್ಚರಿಕೆ

https://pragati.taskdun.com/politics/jaggeshsatish-jarakiholiworning/

Related Articles

Back to top button