
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನ ಪರಿಷತ್ ಮಾಜಿ ಸದಸ್ಯ ಎಸ್ ಎಸ್ ಪೂಜಾರಿ ಭಾನುವಾರ ನಿಧನರಾಗಿದ್ದಾರೆ.
ಸಮಾಜಕ್ಕೆ ನಿಜವಾದ ಗಾಂಧಿವಾದಿಯಾಗಿ ಸೇವೆ ಸಲ್ಲಿಸಿದ್ದ ಅವರು 1980 ರಿಂದ 2004 ರ ನಡುವೆ ರಾಜ್ಯ ವಿಧಾನ ಪರಿಷತ್ವ ಸದಸ್ಯರಾಗಿದ್ದರು. ವಿಪ ಸದಸ್ಯರಾಗಿದ್ದ ಅವಧಿಯಲ್ಲಿ ಶಿಕ್ಷಕರ ಕುಂದುಕೊರತೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ವಿದ್ಯಾರ್ಥಿಗಳು ಅವರನ್ನು ಪೂಜಾರಿ ಸರ್ ಎಂದು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ.
ಎಸ್ ಎಸ್ ಪೂಜಾರಿ ಅವರು ಪತ್ನಿ ಶ್ರೀಮತಿ ದಮಯಂತಿ, ಪುತ್ರ ಡಾ ಸಿದ್ಧಾರ್ಥ್ ಪೂಜಾರಿ ಮತ್ತು ಪುತ್ರಿ ಶ್ರದ್ಧಾ ಹಾಗೂ ಅಪಾರ ಸಂಖ್ಯೆಯ ಬಂಧು, ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯು ನವೆಂಬರ್ 6 ರಂದು ಸಂಜೆ 7.30 ಕ್ಕೆ ಬೆಳಗಾವಿಯ ಲಕ್ಷ್ಮೀ ಕಾಂಪ್ಲೆಕ್ಸ್ ಸದಾಶಿವನಗರದ ಲಿಂಗಾಯತ ಸ್ಮಶಾನ ಭೂಮಿಯಲ್ಲಿ ನಡೆಯಲಿದೆ.
ಲಾರಿ-ಬೈಕ್ ನಡುವೆ ಭೀಕರ ಅಪಘಾತ; ದಂಪತಿ ಸ್ಥಳದಲ್ಲೇ ದುರ್ಮರಣ
https://pragati.taskdun.com/latest/bikelorryaccidenthusband-wifedeathmangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ