Kannada NewsKarnataka NewsLatestPolitics

*ಏಕೀಕರಣ ಹೋರಾಟಗಾರ, ಮಾಜಿ ಎಂ ಎಲ್ ಸಿ ಮಾರುತಿರಾವ್ ಮಾಲೆ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಶಿಕ್ಷಣ ಪ್ರೇಮಿ, ವಿಧಾನಪರಿಷತ್ ಮಾಜಿ ಸದಸ್ಯ ಮಾರುತಿರಾವ್ ಡಿ ಮಾಲೆ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ಮಾರುತಿರಾವ್ ರಾಷ್ಟ್ರ ಏಕೀಕರಣ ಹೋರಾಟಗಾರರೂ ಆಗಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಲಬುರ್ಗಿಯಲ್ಲಿ ವಿಧಿವಶರಾಗಿದ್ದಾರೆ.

Home add -Advt

ಇಂದು ಜಿಲ್ಲೆಯ ಹಾರುತಿ ಹಡಗಲ್ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಮಾರುತಿರಾವ್ ಮಾಲೆ ಅವರ ಅಗಲಿಕೆಗೆ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಮಾರುತಿರಾವ್ ಅಂತ್ಯಕ್ರಿಯೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗವಹಿಸಲಿದ್ದಾರೆ.

ಮಾರುತಿರಾವ್ ಮಾಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದರು, ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿ ಸ್ಥಾಪಿಸಿ ಅದರ ಜನರಲ್ ಸಕ್ರೇಟರಿ ಆಗಿದ್ದರು. ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದರು.


Related Articles

Back to top button