Kannada NewsKarnataka NewsLatest

ಡಿಆರ್ ಇಒ ದಿಂದ ರಾಷ್ಟೀಯ ಮಟ್ಟದ ಪ್ರಶಸ್ತಿ ಪಡೆದ ಜಿಐಟಿ ಮಾಜಿ ವಿದ್ಯಾರ್ಥಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ, 2020 ರ ಬ್ಯಾಚ್ ನ ಇಸಿಇ ವಿಭಾಗದ ಮಾಜಿ ವಿದ್ಯಾರ್ಥಿ ಅಕ್ಷಯ ಯಡೂರ ಮತ್ತು ಆಯುಷ್ ಶರ್ಮಾ ಅವರು ಡಿಆರ್ ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಭಾರತ ಸರಕಾರ ಆಯೋಜಿಸಿದ ಡೇರ್ ಟು ಡ್ರೀಮ್ 3.0 ನಲ್ಲಿ ಸ್ಪರ್ಧಿಸಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘ಕವಚ್ 120’ ಹೆಸರಿನ ಅವರ ಈ ಯೋಜನೆ, ನವೀನ ಹ್ಯಾಪ್ಟಿಕ್ ಪ್ರತಿಕ್ರಿಯೆ ಮತ್ತು ವೈರ್‌ಲೆಸ್ ಸಂವಹನ ತಂತ್ರಜ್ಞಾನವನ್ನು ಬಳಸುವ ನ್ಯಾವಿಗೇಷನ್ ಸಿಸ್ಟಮ್- ಹೊಗೆ, ಬೆಂಕಿ, ಮಂಜು, ಕತ್ತಲೆ, ದಟ್ಟವಾದ ಸಸ್ಯ ವರ್ಗದಂತಹ ಕಡಿಮೆ ಗೋಚರತೆಯ ಪರಿಸ್ಥಿತಿಗಳೊಂದಿಗೆ ಕಠಿಣ ಪರಿಸರದಲ್ಲಿ ಸಂವಹನ ಮತ್ತು ನ್ಯಾವಿಗೇಷನ್‌ಗಾಗಿ ನಿರ್ಮಿಸಲಾಗಿದೆ.

ಅಕ್ಟೋಬರ್  20 ರಂದು ಗುಜರಾತ್‌ನ ಗಾಂಧಿನಗರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ  ಜರುಗಿತು. ಪ್ರಶಸ್ತಿಯನ್ನು   ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ, ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಪ್ರದಾನ ಮಾಡಿದರು.

ಇವರ ಈ ಉತ್ಕೃಷ್ಟ ಸಾಧನೆಗೆ ಕೆಎಲ್ಎಸ್ ಆಡಳಿತ ಮಂಡಳಿ,  ಕೆಎಲ್ಎಸ್ ಜಿಐಟಿ, ಪ್ರಾಚಾರ್ಯ ಡಾ. ಜೆ.ಕೆ.ಕಿತ್ತೂರ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button