Latest

ಚಂದ್ರಶೇಖರ್ ಸಾವು ಪ್ರಕರಣ; ಕೊಲೆ ಕೇಸ್ ದಾಖಲು

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಾಗಿದ್ದು, ಎಫ್ ಐ ಆರ್ ದಾಖಲಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಚಂದ್ರಶೇಖರ್ ತಂದೆ ರಮೇಶ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 302-ಕೊಲೆ, 201- ಸಾಕ್ಷ್ಯನಾಶ, ಹಾಗೂ 427-ವಾಹನ ಜಖಂ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಲಾಗಿದೆ.

Related Articles
Home add -Advt

ತುಂಗಾ ಮುಖ್ಯ ಕಾಲುವೆಯಲ್ಲಿ ಪತ್ತೆಯಾದ ಕಾರಿನ ಹಿಂಬದಿ ಸೀಟ್ ನಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿತ್ತು. ಚಂದ್ರಶೇಖರ್ ಕೈಕಾಲು ಕಟ್ಟಿ ಹಾಕಿ , ಕಿವಿಗಳ ಮೇಲೆ ಹಲ್ಲೆ ಮಾಡಲಾಗಿದ್ದು, ತಲೆಗೆ ಬಲವಾಗಿ ಆಯುಧಗಳಿಂದ ಹೊಡೆಯಲಾಗಿದೆ ಎಂದು ಶಾಸಕ ರೇಣುಕಾಚಾರ್ಯ ಹಾಗೂ ಕುಟುಬದವರು ಹೇಳುತ್ತಿದ್ದು, ಇದೊಂದು ಯೋಜಿತ ಕೊಲೆಯಾಗಿದೆ.

ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದು, ಮೃತದೇಹ ಕಾರಲ್ಲಿ ಇಟ್ಟು ತುಂಗಾ ಕಾಲುವೆಗೆ ತಳ್ಳಿದ್ದಾರೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆ

https://pragati.taskdun.com/latest/karnatakaheavy-rain3-days/

Related Articles

Back to top button