ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಡಸ್ ಕೆ ಎಚ್ ಗ್ರಾಮದಲ್ಲಿ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ 4 ಲಕ್ಷ ರೂ,ಗಳ ವೆಚ್ಚದಲ್ಲಿ ನೂತನವಾಗಿ ವ್ಯಾಯಾಮ ಶಾಲೆಯನ್ನು ನಿರ್ಮಿಸಲಾಗಿದ್ದು, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಂಗಳವಾರ ಜನರಿಗೆ ಸಮರ್ಪಿಸಿದರು.
ಗ್ರಾಮಸ್ಥರ ಬೇಡಿಕೆಯನ್ನು ಪರಿಗಣಿಸಿ ಗ್ರಾಮಕ್ಕೆ ವ್ಯಾಯಾಮ ಶಾಲೆಯನ್ನು ಕೊಡುಗೆಯಾಗಿ ನೀಡಿರುವುದಾಗಿ ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು. ಇದೇ ಸಮಯದಲ್ಲಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಶಾಸಕರು ಮಕ್ಕಳ ಆರೋಗ್ಯ ಹಾಗೂ ವಿದ್ಯಾಭ್ಯಾಸದ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಸಿ ಸಿ ಪಾಟೀಲ, ಅಡಿವೇಶ ಇಟಗಿ, ಸುರೇಶ ಇಟಗಿ, ಇನಾಯತ್ ಅತ್ತಾರ, ಪರ್ವತಗೌಡ ಪಾಟೀಲ, ಬಸಮಣ್ಣ ಶೀಗಿಹಳ್ಳಿ, ನ್ಯಾಯವಾದಿ ಗಿಡ್ಡಬಸನ್ನವರ, ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಯ್ಕ್, ಗೌಸ್ ಸಿಂಪಿ, ಶಂಕರಗೌಡ ಪಾಟೀಲ, ಭೀಮಶಿ ಹಾದಿಮನಿ, ಕಲ್ಲಪ್ಪ ವನ್ನೂರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
https://pragati.taskdun.com/road-work-at-a-cost-of-rs-10-crores-mla-lakshmi-hebbalkar-started-the-project-after-offering-prayers/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ