Belagavi NewsBelgaum News

*ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಮತದಾನದ ಹಕ್ಕು ಚಲಾಯಿಸಿ: ನ್ಯಾಯಾಧೀಶರಾದ ಇನವಳ್ಳಿ ಕರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಭಾರತ ಬಹು ದೊಡ್ಡ‌ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಸಧೃಡ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ಬಹು ಮುಖ್ಯವಾಗಿದ್ದು, ಮತದಾನದ ಸಂದರ್ಭದಲ್ಲಿ ಯಾವುದೇ ಆಸೆ, ಆಮಿಷಕ್ಕೊಳಗಾಗದೇ, ಜಾತಿ-ಮತ ಮರೆತು ತಮ್ಮ ಮತದಾನದ ಹಕ್ಕನ್ನು‌ ಚಲಾಯಿಸುವುದು ಎಲ್ಲರ‌ ಕರ್ತವ್ಯವಾಗಿದೆ” ಎಂದು ಪ್ರಧಾನ‌ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಟಿ.ಎನ್.ಇನವಳ್ಳಿ ಅವರು ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶನಿವಾರ (ಜ.25) ಜರುಗಿದ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮತದಾನ ಎನ್ನುವದು ಸಂವಿಧಾನಾತ್ಮಕಾಗಿ ಪಡೆದಂತಹ ಅತ್ಯಮೂಲ್ಯ ಹಕ್ಕಾಗಿದೆ.  ಸಂವಿಧಾನ ನೀಡಿದಂತಹ ಅತ್ಯಮೂಲ್ಯವಾದ ಹಕ್ಕನ್ನು ತಪ್ಪದೇ ಚಲಾಯಿಸುವುದು ಅರ್ಹ ಭಾರತೀಯ‌ ಪ್ರಜೆಗಳ ಕರ್ತವ್ಯವಾಗಿದೆ ಎಂದರು.

ಮತದಾನದ ಸಂದರ್ಭದಲ್ಲಿ ಉತ್ತಮ‌ ಆಡಳಿತ‌ ನೀಡುವಂತಹ‌ ವ್ಯಕ್ತಿಯನ್ನು ಆರಿಸುವುದು ಮತದಾರರ ಕೈಯಲ್ಲಿದೆ. ಮತದಾನದ‌ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಮತ‌ಚಲಾಯಿಸುವದು ಮತದಾರರ ಕರ್ತವ್ಯವಾಗಿದೆ. 18 ವರ್ಷ ಮೇಲ್ಪಟ್ಟವರೆಲ್ಲರೂ ಮತದಾರರ ಪಟ್ಟಿಯಲ್ಲಿ ತಮ್ಮ‌ಹೆಸರನ್ನು ನೊಂದಾಯಿಸಿಕೊಂಡು ಕಡ್ಡಾಯವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರ  ಜೊತೆಗೆ‌ ಇತರರನ್ನು ಮತದಾನಕ್ಕೆ ಪ್ರೇರೆಪಿಸುವಂತೆ ನ್ಯಾಯಾದೀಶರಾದ ಟಿ.ಎನ್.ಇನವಳ್ಳಿ ಅವರು ಕರೆ ನೀಡಿದರು.

Home add -Advt

ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಮತದಾನ‌ ಎಂಬುದು ಮೂಲಭೂತ ಹಕ್ಕಿನ ಜೊತೆಗೆ ಅದೊಂದು ಬಹುದೊಡ್ಡ ಜವಾಬ್ದಾರಿಯಾಗಿದೆ. ನಮ್ಮ‌ ಕ್ಷೇತ್ರ ಅಭಿವೃದ್ಧಿ ಹಾಗೂ ನಮಗೋಸ್ಕರ ಕಾರ್ಯ ನಿರ್ವಹಿಸುವಂತಹ ಸಮರ್ಥರನ್ನು ಆಯ್ಕೆ ಮಾಡುವುದು ಮತದಾನದ ಶಕ್ತಿಯಾಗಿದೆ ಎಂದರು.

ಯುವಶಕ್ತಿ ಎನ್ನುವುದು ಅತೀ ಶಕ್ತಿಶಾಲಿಯಾಗಿದೆ ಇದು ದೇಶದ ಭವಿಷ್ಯವನ್ನು ನಿರ್ಮಿಸುತ್ತದೆ. ಈ ಯುವ ಶಕ್ತಿಯನ್ನು ಉತ್ತಮ ದಾರಿಯಲ್ಲಿ ನಡೆಸಿದರೆ ರಾಷ್ಟ್ರವನ್ನು ಸಧೃಡ ರಾಷ್ಟ್ರವನ್ನಾಗಿಸಬಹುದು. 

ಶಾಯರಿ‌ ಮೂಲಕ ತದಾನದ ಮಹತ್ವ ಸಾರಿದ‌ ಜಿಲ್ಲಾಧಿಕಾರಿ

“ವೋಟ ತುಮ್ಹಾರಾ ಶಕ್ತಿ ಬಡಿ, ಇಸೆ ನಾ ವ್ಯರ್ಥ ಗವಾನಾ ದೇಶಕಿ ತಕದೀರ ಹೈ ಇಸಮೇ‌, ಅಪನೇ ತಕದಿರ ಬದಲನಾ ಏಕ ಏಕ ವೋಟ ಸೇ ಬನತಿ ಬದಲಾವಕಿ ತಸವಿರ, ಸೋಚ ಸಮಜಕರ ಚುನೋ ನೇತಾ ಯೇ ಹೈ ಲೋಕ ತಂತ್ರಕಿ”  ಎಂಬ ಶಾಯರಿ ಹೇಳುವ‌ ಮೂಲಕ‌ ಮತದಾನದ ಮಹತ್ವವನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸಾರಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ‌ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತೆ ಶುಭಾ ಬಿ, ಹಿರಿಯ ಅಧಿಕಾರಿ ಗೀತಾ ಕೌಲಗಿ, ಜಿಲ್ಲಾ‌ ಪಂಚಾಯತ ಯೋಜನಾ ನಿರ್ದೆಶಕರಾದ ರವಿ‌ ಬಂಗಾರಪ್ಪನವರ,  ಮಹಾನಗರ ಪಾಲಿಕೆ ಉಪ ಆಯುಕ್ತರುಗಳಾದ ಉದಯಕುಮಾರ ತಳವಾರ, ರೇಷ್ಮಾ ತಾಳಿಕೊಟಿ,  ಪದವಿಪೂರ್ವ  ಶಿಕ್ಷಣ ಇಲಾಖೆ ಉಪನಿರ್ದಶಕ ಕಾಂಬಳೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಕಾಲೇಜು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ‌ ಯುವ‌ ಮತದಾರರಿಗೆ ಮತದಾನ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಮತದಾರರ ನೊಂದಣಿ‌ ಕಾರ್ಯಗಳನ್ನು ಉತ್ತಮವಾಗಿ ಕಾರ್ಯ ನಿರ್ವಹಿಸಿದ ಬಿ.ಎಲ್.ಓ.ಗಳಿಗೆ ಹಾಗೂ ಶಾಲಾ‌ ಕಾಲೇಜು ವಿಧ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿಧ್ಯಾರ್ಥಿಗಳಿಗೆ ಪ್ರಮಾಣ‌ಪತ್ರ ನೀಡಿ ಗೌರವಿಸಲಾಯಿತು. 

ತದನಂತರ “ನಾ ಭಾರತ” ಎಂಬ ಕಿರು ಚಿತ್ರಪ್ರದರ್ಶನ ಹಾಗೂ ಮತದಾರ ದಿನ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಮತದಾರರ ದಿನಾಚರಣೆ-ಜಾಗೃತಿ ಜಾಥಾ

ರಾಷ್ಟ್ರೀಯ‌ ಮತದಾರರ ದಿನಾಚರಣೆಯ ಪ್ರಯುಕ್ತ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮವು ಜಿಲ್ಲಾಧಿಕಾರಿಗಳ‌ ಕಚೇರಿ ಆವರಣದಿಂದ ಪ್ರಾರಂಭವಾದ ಜಾಗೃತಿ‌ಜಾಥಾ ಚನ್ನಮ್ಮ ವೃತ್ತ, ಬಿಮ್ಸ ಆಸ್ಪತ್ರೆ ಮಾರ್ಗವಾಗಿ ಕುಮಾರ ಗಂಧರ್ವ ರಂಗಮಂದಿರ ಬಂದು ತಲುಪಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button