Kannada NewsKarnataka NewsLatest

ಸರಕಾರಿ ಶಾಲೆಯಲ್ಲಿ ಪಾಠ ಮಾಡಲಿದ್ದಾರೆ ಖಾಸಗಿ ಶಿಕ್ಷಕರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ವಿಶಿಷ್ಟ ಕಾರ್ಯಕ್ರಮ, ಯೋಜನೆಗಳ ಮೂಲಕ ಗುರುತಿಸಿಕೊಂಡಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಈಚೆಗೆ ಆರಂಭಿಸಿರುವ ಶಾಲೆಗಾಗಿ ನಾನು ಎಂಬ ಕಾರ್ಯಕ್ರಮದಲ್ಲಿ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಶಾಲೆಯ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಂದ ಶ್ರಮದಾನ ಮತ್ತು ದೇಣಿಗೆ ಮೂಲಕ ತಾವು ಕಲಿತ ಶಾಲೆಗಳಿಗೆ ಆಧುನಿಕ ಸ್ಪರ್ಷ ನೀಡುವ ಕಾರ್ಯಕ್ರಮವನ್ನು ಮೊದಲ ಹಂತದಲ್ಲಿ ಅಭಯ ಪಾಟೀಲ ಆರಂಭಿಸಿದ್ದರು.

ಇದೀಗ ಎರಡನೇ ಹಂತದಲ್ಲಿ ನಗರದ ತಜ್ಞರನ್ನು ಗುರುತಿಸಿ ಅವರಿಂದ ಸರಕಾರಿ ಶಾಲೆಗಳ ಮಕ್ಕಳಿಗೆ ಪಾಠ ಮಾಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸರಕಾರಿ ಶಾಲೆಗಳ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಸಿಗುವಂತಹ ಉತ್ತಮ ಶಿಕ್ಷಣ ಸಿಗುವುದಿಲ್ಲ ಎನ್ನುವ ಸಾಮಾನ್ಯ ಅಭಿಪ್ರಾಯವಿದೆ.

ಈ ಹಿನ್ನೆಲೆಯಲ್ಲಿ ತಜ್ಞ ಶಿಕ್ಷಕರು ಸ್ವಯಂ ಸೇವಕರಾಗಿ ಬಂದು ಸರಕಾರಿ ಶಾಲೆಯಲ್ಲಿ ಮಾಠ ಮಾಡುವ ಯೋಜನೆ ಇದು. ಪ್ರಮುಖವಾಗಿ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ ವಿಷಯಗಳನ್ನು ತಜ್ಞರಿಂದ ಬೋಧನೆ ಮಾಡಿಸಲಾಗುತ್ತದೆ.

ಅಭಯ ಪಾಟೀಲ ಹೇಳುವ ಪ್ರಕಾರ ಈಗಾಗಲೆ 60 ಜನರು ಈ ರೀತಿ ಪಾಠ ಮಾಡಲು ಮುಂದೆ ಬಂದಿದ್ದಾರೆ. ಮಂಗಳವಾರ ಸಭೆ ನಡೆಸಿ 30 ಜನರಿಗೆ ಶಾಲೆಗಳನ್ನು ಹಂಚಿಕೆ ಮಾಡಲಾಗಿದೆ. ಇನ್ನೊಂದೆರಡು ದಿನದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಈ ಸ್ವಯಂ ಸೇವಕ ಶಿಕ್ಷಕರ ಸಭೆ ನಡೆಸಿ ಅವರು ಪಾಠ ಮಾಡುವ ಸಮಯ ಮತ್ತಿತರ ಅಂಶಗಳನ್ನು ಅಂತಿಮಗೊಳಿಸಲಾಗುತ್ತದೆ.

 

ಸರಕಾರಿ ಶಾಲೆಯ ಮಕ್ಕಳಿಗೂ ಖಾಸಗಿ ಶಾಲೆಯ ಮಕ್ಕಳಂತೆ ಗುಣಮಟ್ಟದ ಶಿಕ್ಷಣ ದೊರಕಲಿ ಎನ್ನುವ ಉದ್ದೇಶದಿಂದ ಈ ಯಜನೆ ಆರಂಭಿಸಲಾಗುವುದು. ಸಧ್ಯ ಪ್ರಾಯೋಗಿಕವಾಗಿ ಜಾರಿ ಮಾಡಿ, ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲಾಗುವುದು.

 -ಅಭಯ ಪಾಟೀಲ, ಶಾಸಕ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button