Kannada NewsKarnataka News

*ಅಕ್ರಮ ಮದ್ಯ ಸಾಗಿಸುತ್ತಿದ್ದವರ ಬಂಧನ*

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿ ತಾಲೂಕಿನ ಸಂತಿ ಬಸ್ತಿವಾಡ ಬಳಿ ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿ 35 ಸಾವಿರ ರೂ. ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ್ದ 20 ಲಕ್ಷ ರೂ. ಬೆಲೆಯ ಕಾರನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

 

ಆರೋಪಿ ವಾಹನ ಚಾಲಕನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಕಾರ್ ಮಾಲೀಕನ ಬಂಧನಕ್ಕೆ ಬಲೆ ಬೀಸಲಾಗಿದೆ.
ಬೆಂಗಳೂರಿನ ಯಲಹಂಕದ ಪ್ರಶಾಂತಕುಮಾರ ಬಿ.ಎಲ್. (38) ಬಂಧಿತ ಆರೋಪಿ.

ಘಟನೆಯ ವಿವರ
ಡಿ.17ರಂದು ಬೆಳಗಾವಿ ಉಪ ವಿಭಾಗದ ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿ ಕಣಕುಂಬಿ ತನಿಖಾ ಠಾಣೆಯ ಸಿಬ್ಬಂದಿ ನೀಡಿದ ಮಾಹಿತಿಯ ಆಧಾರದಲ್ಲಿ ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಸಮೀಪದ ಬೆಳಗಾವಿ-ಜಾಂಬೋಟಿ ರಸ್ತೆಯ ವಿಟಿಯು ಗೇಟ್ ಬಳಿ ರಸ್ತೆಗಾವಲು ಮಾಡುತ್ತಿರುವಾಗ ಒಂದು ಬೂದು ಬಣ್ಣದ ಇನೋವಾ ಕ್ರಿಸ್ಟಾ ಕಾರಿನಲ್ಲಿ (ಕೆಎ-52 ಎಂ-8347) ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ಎಂದು ನಮೂದಿರುವ ವಿವಿದ ನಮೂನೆಯ ಒಟ್ಟ್ಟು 109.200 ಲೀಟರ ಗೋವಾ ಮದ್ಯವನ್ನು ಇರುವುದು ಪತ್ತೆಯಾಗಿದೆ.

ಡಾ:ವೈ ಮಂಜುನಾಥ ಅಬಕಾರಿ ಅಪರ ಆಯುಕ್ತರು ಕೇಂದ್ರ ಸ್ಥಾನ ಬೆಳಗಾವಿ, ಫೀರೋಜಖಾನ ಕಿಲ್ಲೇದಾರ ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ, ಜಯರಾಮೇಗೌಡ, ಅಬಕಾರಿ ಉಪ ಆಯುಕ್ತರು, ಬೆಳಗಾವಿ ಇವರ ಮಾರ್ಗದರ್ಶನದಲ್ಲಿ

ರವಿ ಎಂ. ಮುರಗೋಡ, ಅಬಕಾರಿ ಉಪ ಅಧೀಕ್ಷಕರು ಬೆಳಗಾವಿ ಉಪ ವಿಭಾಗ, ಬೆಳಗಾವಿರವರ ನೇತೃತ್ವದಲ್ಲಿ ಮಂಜುನಾಥ ಗಲಗಲಿ ಅಬಕಾರಿ ನಿರೀಕ್ಷಕರು, ಬೆಳಗಾವಿ ಉಪ ವಿಭಾಗ, ಬೆಳಗಾವಿ ಇವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ದಾಳಿಯಲ್ಲಿ ಸಿದ್ದಪ್ಪ ಯರಗಟ್ಟಿ ಅಬಕಾರಿ ಉಪ ನಿರೀಕ್ಷಕರು, ಕಣಕುಂಬಿ ತನಿಖಾ ಠಾಣೆ, ಮಂಜುನಾಥ ಮಾಸ್ತಮರಡಿ, ಬನಪ್ಪ ಮೆಳವಂಕಿ, ಗುಂಡು ಪೂಜಾರಿ, ಅಮೃತ ಪೂಜಾರಿ ಅಬಕಾರಿ ಪೇದೆ, ಕಣಕುಂಬಿ ತನಿಖಾ ಠಾಣೆ ಮತ್ತು ಸುನೀಲ ಪಾಟೀಲ, ಎಂ.ಎಫ್.ಕಟಗೆನ್ನವರ ಅಬಕಾರಿ ಪೇದೆ ಅವರು ಪಾಲ್ಗೊಂಡಿದ್ದರು.

*ಪೊಲೀಸ್ ಇಲಾಖೆಯಿಂದ ಅಪರೂಪದ ಕಾರ್ಯಕ್ರಮ*

 

 

 

 

 

 

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button