ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ಪುರೋಹಿತರ ಬಳಿ ಬರುವಾಗ ಜನ ಸಂಕಷ್ಟದಲ್ಲಿ ಬಂದಿರುತ್ತಾರೆ. ಅವರಿಗೆ ಮಾರ್ಗದರ್ಶನ ಮಾಡಿ ಅವರ ಕಾರ್ಯಕ್ಕೆ ಜಯ ಸಿಗುವಂತೆ ಪ್ರಾರ್ಥಿಸುವ ಜವಾಬ್ದಾರಿ ಪುರೋಹಿತರ ಮೇಲೆ ಇರುತ್ತದೆ. ಪುರೋಹಿತರು ಆ ನಿಟ್ಟಿ ನ ಕಾರ್ಯ ಮಾಡಿ ಜನರಿಗೆ ಮಾರ್ಗದರ್ಶನ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಅವರು ಹುಕ್ಕೇರಿ ಹಿರೇಮಠದಲ್ಲಿ ಜರುಗಿದ ದಸರಾ ಉತ್ಸವದಲ್ಲಿ ಕರ್ನಾಟಕ ರಾಜ್ಯ ಜಂಗಮ ವೀರಶೈವ ಪುರೋಹಿತ ಅರ್ಚಕ ಸಂಘದ ರಾಜ್ಯಾಧ್ಯಕ್ಷ ವಿದ್ವಾನ್ ಚಂದ್ರಶೇಖರ ಶಾಸ್ತ್ರಿಗಳಿಗೆ ಸನ್ಮಾನಿಸಿ ಮಾತನಾಡಿದರು. ಹಾಗೆಯೇ ಸಂಘದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ವತಿಯಿಂದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಂಘಕ್ಕೆ 25,000 ರೂ. ದೇಣಿಗೆ ನೀಡುವುದರ ಮುಖಾಂತರ ಪುರೋಹಿತರು ಏಕ ಕಂಠದಲ್ಲಿ ಮಂತ್ರವನ್ನು ಹೇಳುವುದು ಮತ್ತು ವಸ್ತ್ರಸಂಹಿತೆಯನ್ನು ರೂಢಿಸಿಕೊಂಡು ಒಳ್ಳೆಯ ಕಾರ್ಯವನ್ನು ಮಾಡಲಿ. ಕರ್ನಾಟಕದಲ್ಲಿ ಸುಮಾರು 30 ಸಾವಿರಕ್ಕಿಂತ ಹೆಚ್ಚು ಪುರೋಹಿತರು ಇದ್ದಾರೆ. ಅವರಿಗೆ ಮಾರ್ಗದರ್ಶನ ಮಾಡುವಂತ ಕಾರ್ಯ ಮಾಡಲಿ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಚಂದ್ರಶೇಖರ ಶಾಸ್ತ್ರಿಗಳು ಗುರುಗಳ ಕೃಪೆಯಿಂದ ಈ ಸ್ಥಾನ ಒದಗಿ ಬಂದಿದೆ. ಪ್ರಾಮಾಣಿಕವಾಗಿ ಈ ಕಾರ್ಯವನ್ನು ನಿರ್ವಹಿಸುತ್ತೇನೆ. ಪುರೋಹಿತರ ಯಾವುದೇ ಕಷ್ಟ ವಿದ್ದರೂ ಅವರಿಗೆ ಸ್ಪಂದಿಸುವ ಮುಖಾಂತರ ಎಲ್ಲರ ಮಾರ್ಗದರ್ಶನ ಪಡೆದು ಈ ಕಾರ್ಯವನ್ನು ಮಾಡುತ್ತೇನೆ ಎಂದರು. ವಿದ್ವಾನ್ ಸಂಪತ್ ಕುಮಾರ್ ಶಾಸ್ತ್ರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ