
FIR ದಾಖಲು
ಪ್ರಗತಿವಾಹಿನಿ ಸುದ್ದಿ: ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ ಸಂಭವಿಸಿ ಘಟನೆಯಲ್ಲಿ ಮೂವರು ಮೃತಪಟ್ಟಿರುವ ಘಟನೆ ಬೆಂಗಳೂರಿನ ರಾಮಸಂದ್ರದಲ್ಲಿ ನಡೆದಿದೆ.
ಅಗ್ನಿ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದು, ಮೂವರಲ್ಲಿ ಇಬ್ಬರ ಗುರುತು ಪತ್ತೆಯಾಗಿದೆ. ಗೋಡೌನ್ ಮಾಲೀಕ ಸಲಿಂ (50) ಹಾಗೂ ನಾಯಂಡಹಳ್ಳಿ ನಿವಾಸಿ ಚಾಲಕ ಮೆಹಬೂಬ್ (35) ಮೃತರು. ಘಟನೆಯಲ್ಲಿ 6 ಜನ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಓರ್ವ 10 ವರ್ಷದ ಬಾಲಕನಿದ್ದು, ಶೇ.60ರಷ್ಟು ಸುಟ್ಟಗಾಯಗಳಿಂದ ಬಳತ್ತಿದ್ದಾನೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ಗೋಡೋನ್ ಮಾಲೀಕ ಸಲಿಂ ಹಾಗೂ ಜಾಗದ ಮಾಲೀಕ ವಿಠಲ್ ವಿರುದ್ಧ ಕುಂಬಳಗೋಡು ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ವಿಠ್ಠಲ್ ಪರಾರಿಯಾಗಿದ್ದಾನೆ.
ಗಾಯಾಳುಗಳು ಹೊಸ ಫ್ಯಾಕ್ಟರಿಯಾಗಿದೆ ಹಾಗೂ ಮನೆಯ ಬಳಿಯೇ ಇರುವುದರಿಂದ ಅನುಕೂಲವಾಗುತ್ತದೆ. ಅಲ್ಲದೇ ಸಂಬಳವೂ ಜಾಸ್ತಿ ಸಿಗುತ್ತದೆ ಎಂದು ವಾರದ ಹಿಂದಷ್ಟೇ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದೆ. ಆದರೆ ಅಷ್ಟರಲ್ಲೇ ದುರಂತ ಸಂಭವಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ