ಗೋವಾದಲ್ಲಿ ಕರ್ನಾಟಕದ ಕಾರ್ಮಿಕರ ಸಭೆ ನಡೆಸುತ್ತಿರುವ ಫಡ್ನವೀಸ್, ಸಿ.ಟಿ.ರವಿ, ರಮೇಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಪಣಜಿ – ಬುಧವಾರ ಗೋವಾಕ್ಕೆ ತೆರಳಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಗುರುವಾರ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ರಾಜ್ಯ ಸಚಿವಸಂಪುಟಕ್ಕೆ ಸೇರ್ಪಡೆ ಕುರಿತು ಕಸರತ್ತು ನಡೆಸುತ್ತಿರುವ ರಮೇಶ್, ಪಡ್ನವೀಸ್ ಮೂಲಕ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ. ಪಣಜಿಯಲ್ಲಿರುವ ಬಿಜೆಪಿ ಅತಿಥಿಗೃಹದಲ್ಲಿ ಪಡ್ನವೀಸ್, ರಮೇಶ ಜಾರಕಿಹೊಳಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮೊದಲಾದವರು ವಾಸ್ತವ್ಯ ಹೂಡಿದ್ದಾರೆ.

ಸಧ್ಯ ಪಡ್ನವೀಸ್, ಸಿ.ಟಿ.ರವಿ, ರಮೇಶ ಜಾರಕಿಹೊಳಿ ಮೊದಲಾದವರು ಪಣಜಿಯಲ್ಲಿ ಕರ್ನಾಟಕದ ಕಾರ್ಮಿಕರ ಸಂಘದ ಸಭೆ ನಡೆಸುತ್ತಿದ್ದಾರೆ. ಪಡ್ನವೀಸ್ ಸ್ವಲ್ಪ ಸಮಯ ಸಭೆಯಲ್ಲಿದ್ದು ನಿರ್ಗಮಿಸಿದ್ದು, ಸಭೆ ಮುಂದುವರಿದಿದೆ. ಸಭೆಯ ಬಳಿಕ ಕೆಲವೆಡೆ ಸಿ.ಟಿ.ರವಿ ಜೊತೆಗೆ ರಮೇಶ ಜಾರಕಿಹೊಳಿ ಸಹ ಚುನಾವಣೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಬಿಜೆಪಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಕಿರಣ ಜಾಧವ, ನಿಪ್ಪಾಣಿಯ ಅಶೋಕ ಅಸೋದೆ ಮೊದಲಾದವರು ಇದ್ದಾರೆ.

Home add -Advt

ಸಚಿವ ಸ್ಥಾನಕ್ಕಾಗಿ ರಮೇಶ್ ಜಾರಕಿಹೊಳಿ ಹೊಸ ಪ್ಲಾನ್: ಆಕಾಂಕ್ಷಿಗಳ ಪಟ್ಟಿಯಲ್ಲಿ ಯಾರಿದ್ದಾರೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button