Latest

ಸಾಯಿಬಾಬಾ ಅವತಾರವೆಂದು ಸ್ವಯಂಘೋಷಿತ ದೇವ ಮಾನವನಿಂದ ಭಕ್ತರಿಗೆ ವಂಚನೆ

ಪ್ರಗತಿವಾಹಿನಿ ಸುದ್ದಿ; ರಾಮನಗರ: ಸಾಯಿಬಾಬಾ ಮೂರನೇ ಅವಾತಾರ ಎಂದು ಹೇಳಿಕೊಂಡು ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಡೋಂಗಿ ಬಾಬಾ ವಿರುದ್ಧ ರಾಮನಗರದ ಚೆನ್ನಪಟ್ಟಣದ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಸಚಿನ್ ಆಕಾರಾಂ ಸರ್ ಗರ್ ಎಂಬಾತ ತಾನು ಸ್ವಯಂಘೋಷಿತ ದೇವಮಾನವ, ಸಾಯಿಬಾಬಾ ಮೂರನೇ ಅವತಾರ ಎಂದು ಹೇಳಿ ನಿಮ್ಮ ಕಷ್ಟಗಳನ್ನು ಪರಿಹರಿಸುತ್ತೇನೆ ಎಂದು ನಂಬಿಸಿ, ಜನರಿಂದ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ.

ಸ್ವಯಂ ಘೋಷಿತ ಡೊಂಗಿ ಬಾಬಾನಿಂದ ಹಲವರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದರು. ಈತನಿಂದ ವಂಚನೆಗೊಳಗಾದ ಭಕ್ತೆ ಸಿಂಧೂ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪ್ರಕರಣ ದಾಖಲಾಗುತ್ತಿದ್ದಂತೆ ನಕಲಿ ಬಾಬ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸಾಯಿಬಾಬಾ ಜೀವನ ಚರಿತ್ರೆಯಲ್ಲಿ ಪುಟ್ಟಭರ್ತಿ ಸಾಯಿ ಬಾಬಾ ಮರನಾ ನಂತರ ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಪ್ರೇಮ ಸಾಯಿ ಬಾಬಾ ಆಗಿ ಅವತರಿಸುತ್ತಾರೆ ಎಂಬ ಉಲ್ಲೇಖವಿದ್ದು ಇದನ್ನೇ ಬಂದವಾಳ ಮಾದಿಕೊಂಡ ಈತ ಇದ್ದಕ್ಕಿದ್ದಂತೆ ಮಳೂರು ಬಳಿ ಕಾಣಿಸಿಕೊಂಡು ತಾನೇ ಪ್ರೇಮಸಾಯಿ ಬಾಬಾ ಎಂದು ಭಕ್ತರನ್ನು ನಂಬಿಸಿದ್ದ.

Home add -Advt

ಮಂಡಿಪೇಟೆಯ ಯಶೋಧಮ್ಮ ಎಂಬುವವರ ಮನೆಯಲ್ಲಿ ಭಜನೆ ಕಾರ್ಯಕ್ರಮ ಮಾಡಿದ್ದ ಡೋಂಗಿ ಬಾಬಾನನ್ನು ನಂಬಿ ಭಜನೆ ಕಾರ್ಯಕ್ರಮದಲ್ಲಿ ಹಲವಾರು ಭಕ್ತರು ಭಾಗವಹಿಸಿದ್ದರು. ಅವರಲ್ಲಿ ಸಿಂಧೂ ಎಂಬ ಮಹಿಳೆ ಕೂಡ ಒಬ್ಬರು. ಸಿಂಧೂ ಅವರ ತೋಟದ ಮನೆಯಲ್ಲಿ ಭಜನೆ ಕಾರ್ಯಕ್ರಮ ಮಾಡಲು ಅವಕಾಶ ಕೊಡುವಂತೆ ಕೇಳಿಕೊಮ್ಡಿದ್ದ ಅದಕ್ಕೆ ಸಿಂಧೂ ತಮ್ಮ ಪತಿಯನ್ನು ಒಪ್ಪಿಸಿ ತೋಟದ ಮನೆಯಲ್ಲಿ ಭಜನೆ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದರು. ಬಳಿಕ ಈ ಜಾಗವನ್ನು ಪ್ರೇಮ್ ಅಸಾಯಿ ಟ್ರಸ್ಟ್ ಗೆ ಬರೆದುಕೊಡುವಂತೆ ಒತ್ತಾಯಿಸಿದ್ದ. ಈ ಬಗ್ಗೆ ಸಿಂಧೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿರುವ ನಕಲಿ ಬಾಬಾಗಾಗಿ ಪೊಲಿಸರು ಶೋಧ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ ಕೇಸ್; ಆರೋಪಿಗೆ ಭಯೋತ್ಪಾದಕರ ಲಿಂಕ್

Related Articles

Back to top button