ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ‘ಓಂ ಸಾಯಿರಾಜ ಕ್ಲಿನಿಕ್’ ಹೆಸರಿನಲ್ಲಿ ದವಾಖಾನೆ ನಡೆಸುತ್ತಿದ್ದ ನಕಲಿ ವೈದ್ಯನ ಆಸ್ಪತ್ರೆ ಸೀಜ್ ಮಾಡಲಾಗಿದೆ.
ಸಾರ್ವಜನಿಕರಿಂದ ದೂರು ಬಂದಿದ್ದ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಕೋಣಿ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಪರಿಶೀಲಿಸಿದಾಗ ನಕಲಿ ವೈದ್ಯ ಎಂದು ಗೊತ್ತಾಗಿದೆ.
ಕೂಡಲೇ ದವಾಖಾನೆಯನ್ನು ಸೀಜ್ ಮಾಡಿ, ನಕಲಿ ವೈದ್ಯ ರಾಜು ಎಂ. ಪಾಟೀಲ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ. ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ (ಕೆಪಿಎಂಇ) ನಿಂದ ಈ ವೈದ್ಯ, ಪರವಾನಗಿ ಪಡೆದಿಲ್ಲ ಹಾಗೂ ವೈದ್ಯ ಪದವಿ ಪಡೆದಿರುವ ಬಗ್ಗೆ (ಕರ್ನಾಟಕದ) ಪ್ರಮಾಣ ಪತ್ರ ಇಲ್ಲದ ಕಾರಣ ಆಸ್ಪತ್ರೆ ಸೀಜ್ ಮಾಡಿ, ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ತಿಳಿಸಿದ್ದಾರೆ.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಶ್ರೀಕಾಂತ ಸುಣದೊಳ್ಳಿ ಕೆಪಿಎಂಇ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ಬಿಸನಳ್ಳಿ ಅವರು ದಾಳಿ ವೇಳೆ ಇದ್ದರು.
ಗ್ರಾಮದೇವತೆಗೆ ಸೇರಿದ ಆಸ್ತಿ ಬಳಕೆ ವಿವಾದ: ಚಿಗುಳೆ ಗ್ರಾಮದಲ್ಲಿ ಹಿಂಸಾಚಾರ; 25 ಗ್ರಾಮಸ್ಥರಿಗೆ ಗಾಯ
https://pragati.taskdun.com/dispute-over-use-of-property-belonging-to-village-deity-violence-in-chigule-village-25-villagers-injured/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ