ಪ್ರಗತಿವಾಹಿನಿ ಸುದ್ದಿ; ಮೈಸೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಹಾಗೂ ಖಾಸಗಿ ಜಾಗಗಳನ್ನು ಮಾರಾಟ ಮಾಡುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಜಾರಾಂ ಸೇರಿದಂತೆ ಐವರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಶಾಸಕ ರಿಜ್ವಾನ್ ಅರ್ಷದ್ ಅವರ ತಂದೆಗೆ ಈ ತಂಡ ಮೋಸ ಮಾಡಿತ್ತು. ಮೈಸೂರಿನ ಉದಯಗಿರಿಯಲ್ಲಿರುವ 80×100 ಅಡಿ ವಿಸ್ತೀರಣದ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ಮುಡಾಗೆ ಸೇರಿದ ದಾಖಲೆ ಪೋರ್ಜರಿ ಮಾಡಿ ಬಳಿಕ ಜಯರಾಂ ಹಾಗೂ ತಂಡ ನಿವೇಶನದ ಮೇಲೆ ಬ್ಯಾಂಕ್ ಸಾಲ ಪಡೆಯಲು ಯತ್ನಿಸಿದೆ.
ನಕಲಿ ದಾಖಲೆಗಾಗಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸೀಲ್ ಗಳನ್ನು ಕೂಡ ಪೋರ್ಜರಿ ಮಾಡಲಾಗಿದೆ. ಇದೀಗ ಪ್ರಕರಣ ಸಂಬಂಧ ಮೈಸೂರು ನಗರ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ರಾಜಾರಾಂ, ಮೊಹಮ್ಮದ್ ನಯೀಮ್, ಮೊಹಮ್ಮದ್ ಶಹಬಾಜ್, ಭಾಸ್ಕರ್ ಸೇರಿದಂತೆ ಒಟ್ಟು 5 ಜನರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಬಂಧಿತರು ತಾವು ನಕಲಿ ದಾಖಲೆ ಸೃಷ್ಟಿಸಿ ನಿವೇಶ ಮಾರಿದ್ದಾಗಿ ಒಪ್ಪಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲಾ ಪೊಲೀಸ್ ಈಗ ಜನರಿಗೆ ಇನ್ನಷ್ಟು ಹತ್ತಿರ
https://pragati.taskdun.com/latest/belgaum-district-police-is-now-closer-to-people/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ