Latest

ಪತ್ರಕರ್ತರ ಹೆಸರಲ್ಲಿ ಸುಲಿಗೆ; ನಾಲ್ವರ ಬಂಧನ

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಖಾಸಗಿ ಸುದ್ದಿವಾಹಿನಿಯ ವರದಿಗಾರರು ಎಂದು ಹೇಳಿಕೊಂಡು ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ನಾಲ್ವರು ನಕಲಿ ಪತ್ರಕರ್ತರನ್ನು ದಾವಣಗೆರೆ ಜಿಲ್ಲೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನ್ಯೂಸ್ ಚಾನಲ್ ವರದಿಗಾರರು ಎಂದು ಹೇಳಿಕೊಂಡು ಜನರಿಂದ ಸುಲಿಗೆ ಮಾಡುತ್ತಿದ್ದರು. ಮಣ್ಣು ತೆಗೆಯಲು ಮುಂದಾಗಿದ್ದ ರೈತರೊಬ್ಬರ ಬಳಿ ಇದು ಕಾನೂನು ಬಾಹಿರ ಕೆಲಸ ವಿಷಯ ಗೊತ್ತಾಗದಂತೆ ಮಾಡಲು 50 ಸಾವಿರ ರೂಪಾಯಿ ಹಣ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು.

Home add -Advt

ರೈತ ಪೊಲೀಸರ ಗಮನಕ್ಕೆ ತಂದಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ನಾಲ್ವರು ನಕಲಿ ಪತ್ರಕರ್ತರನ್ನು ಬಂಧಿಸಿದ್ದಾರೆ. ಓರ್ವ ಆರೋಪಿ ಪರಾರಿಯಾಗಿದ್ದು ಆತನಿಗಾಗಿ ಹುಡುಕಾಟ ನಡೆಸಲಾಗಿದೆ.

ಬಂಧಿತ ಆರೋಪಿಗಳನ್ನು ರಾಘವೇಂದ್ರ , ಅಣ್ಣಪ್ಪ, ಸಂತೋಷ್   ಹಾಗೂ ಪಕ್ಕಿರೇಶ್ ಎಂದು ಗುರುತಿಸಲಾಗಿದ್ದು, ಸಾಬ್ ಜಾನ್ ಎಂಬಾತ ತಪ್ಪಿಸಿಕೊಂಡಿದ್ದಾನೆ.

ಅಗ್ನಿ ದುರಂತ; ವ್ಯಕ್ತಿ ಸಜೀವ ದಹನ

Related Articles

Back to top button