Kannada NewsKarnataka NewsLatest

ರಕ್ಕಸಕೊಪ್ಪ ಜಲಾಶಯದಲ್ಲಿ ಜಲಮಟ್ಟ ಕುಸಿತ: ಬೆಳಗಾವಿಗೆ ಎದುರಾಗಲಿದೆಯೇ ಬರ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರಕ್ಕೆ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ವ್ಯಾಪಕವಾಗಿ ಕುಸಿತಕ್ಕೊಳಗಾಗಿದೆ.

ಈ ಬಾರಿಯ ಮುಂಗಾರು ಸಕಾಲದಲ್ಲಿ ಬಿರುಸು ಪಡೆಯದೆ ಕೈಕೊಟ್ಟಲ್ಲಿ ಬೆಳಗಾವಿ ಮಹಾನಗರ ನೀರಿಗೆ ಬರ ಎದುರಿಸುವ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳು ಕಂಡುಬಂದಿವೆ.

ಈ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಶೋಭಾ ಸೋಮನಾಚೆ ಹಾಗೂ ಉಪಮೇಯರ್ ರೇಷ್ಮಾ ಪಾಟೀಲ್ ಅವರು ರಕ್ಕಸಕೊಪ್ಪ ಜಲಾಶಯಕ್ಕೆ ಭೇಟಿ ನೀಡಿ ಸ್ಥಿತಿಗತಿಗಳ ಪರಿಶೀಲನೆ ನಡೆಸಿದರು. ಕೆಯುಐಡಿಎಫ್‌ಸಿ ಅಧೀಕ್ಷಕ ಎಂಜಿನಿಯರ್ ಅಶೋಕ್ ಬರ್ಕುಳೆ ಹಾಗೂ ಇತರ ಅಧಿಕಾರಿಗಳು ಈ ವೇಳೆ ಹಾಜರಿದ್ದರು.

ರಕ್ಕಸಕೊಪ್ಪ ಜಲಾಶಯ  68 ಎಂಎಲ್‌ಡಿ ನೀರು ಸರಬರಾಜು ಸಾಮರ್ಥ್ಯ ಹೊಂದಿದೆ. ಹೀಗಾಗಿ ರಕ್ಕಸಕೊಪ್ಪ ಜಲಾಶಯದಿಂದ 55 ಎಂಎಲ್‌ಡಿ ನೀರನ್ನು ನಗರಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ನೀರಿನ ಮಟ್ಟ ವ್ಯಾಪಕ ಕುಸಿತಕ್ಕೊಳಗಾಗಿದ್ದು 30 ಎಂಎಲ್‌ಡಿ ನೀರು ಮಾತ್ರ ಪೂರೈಕೆ ಮಾಡಲಾಗುತ್ತಿದೆ.

Home add -Advt

ಒಂದೊಮ್ಮೆ ಸಕಾಲದಲ್ಲಿ ಮಳೆಯಾಗಿ ಜಲಾಶಯದ ಮಟ್ಟದಲ್ಲಿ ಏರಿಕೆಯಾಗದಿದ್ದಲ್ಲಿ ಯಾವ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಚರ್ಚೆ ನಡೆಸಲು ಮುಂದಾಗಿದ್ದಾರೆ.

https://pragati.taskdun.com/state-governments-decision-to-revise-school-textbooks-again/

https://pragati.taskdun.com/if-modi-has-said-that-he-will-give-15-lakhs-give-evidence-union-minister-a-narayanaswamy/

https://pragati.taskdun.com/belgaum-constable-and-three-arrested-for-deceiving-to-exchange-notes-of-2000-rs/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button