*ಸಿಎಂ ವಿರುದ್ಧ ಬೆಳಗಾವಿಯಲ್ಲಿ ರೈತರ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಪ್ರವಾಹ ವೀಕ್ಷಣೆಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ರೈತರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಾರಣ ಸೋಮವಾರ ಮುಖ್ಯಮಂತ್ರಿಗೆ ನೇಗಿಲ ಯೋಗಿ ಸುರಕ್ಷಾ ರೈತ ಸಂಘ ಜೈಜವಾನ್ ಕರ್ನಾಟಕ ರಾಜ್ಯ ಘಟಕ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ನಗರದ ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆಯಲ್ಲಿ ರೈತರಿಗೆ ಸರಿಯಾದ ತೂಕ ಕೊಡದೇ ದರದಲ್ಲಿ ಮೋಸ ಮಾಡಿ ಹಾಗೂ ಸಮಯಕ್ಕೆ ಸರಿಯಾಗಿ ಹಣವನ್ನು ಪಾವತಿಸದೇ ಶೋಷಣೆ ಮಾಡುತ್ತಿದ್ದಾರೆ. ಕೇವಲ ತಮ್ಮ ಲಾಭವನ್ನು ದ್ವಿಗುಣಗೊಳಿಸುವ ಏಕೈಕ ಉದ್ದೇಶದಿಂದ ಖಾಸಗಿ ಮಾರುಕಟ್ಟೆಯನ್ನು ಸ್ಥಾಪನೆ ಮಾಡಿರುತ್ತಾರೆ ಎಂದು ರೈತರು ಸಿಎಂ ಬಳಿ ವಿನಂತಿಸಿಕೊಂಡರು.
ತರಕಾರಿ ಮಾಫಿಯಾ ಕಫಿ ಮುಷ್ಠಿಯಿಂದ ಬಿಡಿಸುವ ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆಯ ಮೇಲೆ ಸರಕಾರದ ನಿಯಂತ್ರಣದ ಮೇಲ್ವಿಚಾರಣೆ ಮತ್ತು ವ್ಯವಹಾರಗಳ ಪರಿವೀಕ್ಷಣೆಗಳು ಇಲ್ಲದೇ ಇರುವುದರಿಂದ ರೈತರಿಗೆ ಅತ್ಯಧಿಕ ರೀತಿಯಲ್ಲಿ ವಂಚನೆಯನ್ನು ಮಾಡುತ್ತಿದ್ದಾರೆ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರೂ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸದೆ ಹಾಗೆ ತೆರಳಿದ ಹಿನ್ನೆಲೆಯಲ್ಲಿ ರೈತರು ಸಿಎಂ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಧರ್ಮರಾಜ ಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ