ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಫ್ಯಾಶನ್ ಶೋ ಎಂದರೆ ಬೇರೆಯದ್ದೇ ಕಲ್ಪನೆ ಬರುವ ಇಂದಿನ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಗುರುವಾರ ಸಂಜೆ ನಡೆದ ಫ್ಯಾಶನ್ ಶೋ – ಸೆರೆಂಡಿಪಿಟ್ -21 ಸಭ್ಯತೆಯ ಎಲ್ಲೆ ಮೀರದೆ ಪ್ರೇಕ್ಷಕರ ಮನಗೆದ್ದಿತು.
ಇಲ್ಲಿಯ ಸಂಕಮ್ ಹೊಟೆಲ್ ಸಭಾಂಗಣದಲ್ಲಿ ಮೂಲತಃ ಬೆಳಗಾವಿಯವರೇ ಆಗಿರುವ ನವನೀತ ಪಾಟೀಲ ವಿಭಿನ್ನವಾದ ಫ್ಯಾಶನ್ ಶೋ ಸಂಘಟಿಸಿದ್ದರು.
ಲಲಿತ ಕಲೆಯಲ್ಲಿ ಪದವೀಧರರಾಗಿರುವ ಡಿಸೈನರ್ ನವನೀತ್ ಬಿ ಪಾಟೀಲ್ ಅವರು ಫ್ಯಾಶನ್ ಟೆಕ್ನಾಲಜಿಯಲ್ಲಿ ಔಪಚಾರಿಕ ತರಬೇತಿಯನ್ನು ಪಡೆದಿದ್ದಾರೆ. ಅವರು 2002 ರಲ್ಲಿ ಮುಂಬೈನಲ್ಲಿ ನಹಿದ್ ಮರ್ಚೆಂಟ್ ಮತ್ತು ಸಂಗೀತಾ ದೇಸಾಯಿ ಅವರಂತಹ ಹೆಸರಾಂತ ವಿನ್ಯಾಸಕರಿಗೆ ಸಹಾಯಕ ವಿನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಪಿಸ್ತಾ, ಗ್ರೀನ್, ಯಲ್ಲೋ ಕಲರ್ ಗಳ ಕ್ಯಾಸುವಲ್ ಡ್ರೆಸ್ ಗಳಿಗೆ ಅತ್ಯಂತ ಸರಳವಾದ ಎಲಿಗಂಟ್ ಡಿಸೈನ್ ನಿಂದ ಆಧುನಿಕ ಮತ್ತು ವಿನೂತನವಾದ ವಿನ್ಯಾಸಗಳನ್ನು ಹೊಸೈರಿ ಮಟೀರಿಯಲ್ ನಲ್ಲಿ ತಯಾರಿಸಿದ ಉಡುಪುಗಳನ್ನು ಬಳಸಿ, ಬೇಸಿಗೆ ಮತ್ತು ಚಳಿಗಾಲ ಎರಡರಲ್ಲೂ ಧರಿಸಬಹುದಾದ ವಸ್ತ್ರ ವಿನ್ಯಾಸ ಅವರ ವಿಶೇಷ.
ರಾಷ್ಟ್ರೀಯ ಸ್ಕಾಲರ್ ಶಿಪ್ ಪಡೆದಿರುವ ನವನೀತ್ ಪಾಟೀಲ, ಹಲವಾರ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. 2007 ರಿಂದ 2017 ರವರೆಗೆ ಮುಂಬೈನ ಎಲ್.ಎಸ್.ರಹೇಜಾ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಮತ್ತು ಸ್ಕೂಲ್ ಆಫ್ ಆರ್ಟ್‌ನಲ್ಲಿ ಫ್ಯಾಷನ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. 2017 ರಲ್ಲಿ ಬೆಳಗಾವಿಗೆ ಬಂದು ರಂಗಭೂಮಿಗಾಗಿ ವೇಷಭೂಷಣಗಳನ್ನು ವಿನ್ಯಾಸಗೊಳಿಸುವ ಮೂಲಕ ತಮ್ಮ ಫ್ಯಾಷನ್ ವೃತ್ತಿಜೀವನವನ್ನು ಮುಂದುವರೆಸಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಸೆರೆಂಡಿಪಿಟಿ’21 ಬಗ್ಗೆ ಕಲ್ಪನೆ ಮೂಡಿಸಿಕೊಂಡ ನವನೀತ್ ಪಾಟೀಲ, ಸಿಲ್ವರ್ ಲೈನಿಂಗ್ ಅನ್ನು ನೋಡುವ ಪ್ರಯತ್ನ, ಹಳೆಯ ಸಹೋದ್ಯೋಗಿಗಳನ್ನು ಮತ್ತೆ ಒಗ್ಗೂಡಿಸುವುದು, ಗ್ರಾಸ್ ರೂಟ್ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವುದು ಮತ್ತು ವಿಶ್ರಾಂತಿಗೆ ಸೂಕ್ತವಾದ ಉಡುಪುಗಳನ್ನು ಸಿದ್ಧಪಡಿಸುವ ಉದ್ದೇಶ ಅವರದ್ದು.
ಆರಾಮದಾಯಕ ಮತ್ತು ವಿವಿಧ ಗಾತ್ರದ ದೇಹದ ಪ್ರಕಾರಗಳಿಗೆ ಹೊಂದಿಕೊಳ್ಳುವ “ಜೆರ್ಸಿ ಫ್ಯಾಬ್ರಿಕ್” ಅವರ ಆಯ್ಕೆಯಾಗಿದೆ. ಸುಮಾರು 70 ಮಾದರಿಯ ಉಡುಪುಗಳನ್ನು ಅವರು ತಯಾರಿಸಿದ್ದಾರೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಹೊಂದಿಕೆಯಾಗಬಲ್ಲ ಉಡುಪುಗಳನ್ನು ತಯಾರಿಸಿ ಗುರುವಾರದ ಶೋ ನಲ್ಲಿ ಬಳಸಿದ್ದರು.
ಸುಲಭವಾಗಿ ಹೊಂದಿಕೊಳ್ಳುವ ಶಾರ್ಟ್ಸ್, ಟೀ-ಶರ್ಟ್‌ಗಳು, ಶರ್ಟ್‌ಗಳು, ಆರಾಮ ಮತ್ತು ಸೊಬಗುಗಳನ್ನು ಹೆಚ್ಚಿಸುವ ಸ್ಟೋಲ್‌ಗಳನ್ನು ಅವರು ಫ್ಯಾಶನ್ ಶೋ ದಲ್ಲಿ ಬಳಸಿದ್ದರು.
ಸೆರೆಂಡಿಪಿಟಿ 21ರಲ್ಲಿ ರಾಕೇಶ್ ವಾಧ್ವಾ, ಮುರಳಿ ಶಿಂಧೆ, ಜಯಶೀಲ ಎಂ, ಶ್ರುತಿ ಹಾಲಭಾವಿ, ಶೀಬಾ ಬಟರ್ಫ್ಲೈ, ಪೂಜಾ ಓಜಾ, ಭೂಮಿ ಓಜಾ, ಕಾಜಲ್ ಸನದಿ, ತೇಜಸ್ವಿ ಪಾಟೀಲ್, ಹರ್ಷಿಣಿ ದೇಸಾಯಿ,
ಶಾಂಭವಿ ದೇಶಪಾಂಡೆ ಮೊದಲಾದವರು ಮಾಡೆಲ್ ಗಳಾಗಿ ಪ್ರದರ್ಶನ ನೀಡಿದರು.
ಸ್ಮಿತಾ ಕದಂ, ಸಂಧ್ಯಾ ಪಾಟೀಲ, ಪರಮೀತ್ ಕೌರ್, ಮಿಥಿಲಿ ದೇಸಾಯಿ, ಇಶಿತಾ ಸುಜಿತ್, ದಿಶಾ ಬಜಾಜ್ ಹಿನ್ನೆಲೆಯಲ್ಲಿ ವಿವಿಧ ನೆರವು ನೀಡಿದರು.
ಸಾಂಬ್ರಾದಲ್ಲಿ ಆರೋಗ್ಯ ಜಾತ್ರೆ: ಮನೆ ಬಾಗಿಲಿಗೆ ಆಸ್ಪತ್ರೆ ತಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ