CrimeKannada NewsKarnataka NewsPolitics

*ಭೀಕರ ರಸ್ತೆ ಅಪಘಾತ: ವೃದ್ಧ ದಂಪತಿ ಹಾಗೂ ಮೊಮ್ಮಗ ನಿಧನ*

ಪ್ರಗತಿವಾಹಿನಿ ಸುದ್ದಿ: ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ  ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿ ಸಂಭವಿಸಿದೆ

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಬಳಿ ಭೀಕರ ರಸ್ತೆ ಅಪಘಾತ ಮೂವರನ್ನು ಬಲಿ ಪಡೆದಿದೆ.  ಹುಚ್ಚೇಗೌಡ (60), ಮೊಮ್ಮಗ ಪ್ರೀತಮ್ (11) ನಿಂಗಮ್ಮ(55) ಮೃತ ದುರ್ದೈವಿಗಳು. 

ರಾಜ್ಯ ಹೆದ್ದಾರಿ 85ರ ಬಳಿಯ ಸುಗ್ಗನಹಳ್ಳಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಮೃತರೆಲ್ಲರೂ ಉಂಗ್ರ ಗ್ರಾಮದವರು. ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೈಕ್ ನಲ್ಲಿ ಹುಚ್ಚೇಗೌಡ, ನಿಂಗಮ್ಮ ದಂಪತಿ ತಮ್ಮ ಮೊಮ್ಮಗ ಪ್ರೀತಮ್ ನನ್ನು ಕೂರಿಸಿಕೊಂಡು ಹೋಗುತ್ತಿದ್ದರು. 

ಈ ವೇಳೆ ಎದುರಿಗೆ ಬಂದ ಲಾರಿಗೆ  ಹುಚ್ಚೇಗೌಡರ ಬೈಕ್ ಡಿಕ್ಕಿ ಹೊಡೆದಿದೆ.  ಸ್ಥಳದಲ್ಲೇ ಹುಚ್ಚೇಗೌಡ, ಪ್ರೀತಮ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನಿಂಗಮ್ಮ ಸಾವನ್ನಪ್ಪಿದ್ದಾರೆ. ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

Home add -Advt

Related Articles

Back to top button