ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಾಡಹಗಲೇ ಹೆತ್ತ ತಂದೆಯೊಬ್ಬ ಮಗನಿಗೆ ರಸ್ತೆಯಲ್ಲಿಯೇ ಬೆಂಕಿ ಹಚ್ಚಿದ ಘೋರ ಘಟನೆ ಬೆಂಗಳೂರಿನ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ನಡೆದಿದೆ.
51 ವರ್ಷದ ಸುರೇಂದ್ರ ತನ್ನ 25 ವರ್ಷದ ಮಗ ಅರ್ಪಿತ್ ಎಂಬಾತನಿಗೆ ನಡು ರಸ್ತೆಯಲ್ಲಿ ಬೆಂಕಿ ಹಚ್ಚಿದ್ದಾರೆ. ಅಪ್ಪನೇ ಮಗನಿಗೆ ಬೆಂಕಿ ಹಚ್ಚಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಸುರೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಸುರೇಂದ್ರ ಬಿಲ್ಡಿಂಗ್ ಪ್ಯಾಬ್ರಿಕೇಷನ್ ಬಿಸಿನೆಸ್ ಮಾಡುತ್ತಿದ್ದು, ಮಗನಿಗೆ ಬಿಸಿನೆಸ್ ನೋಡಿಕೊಳ್ಳುವ ಜವಾಬ್ದಾರಿ ವಹಿಸಿದ್ದರು. ಆದರೆ ಬರೋಬ್ಬರಿ 1.5 ಕೋಟಿ ರೂಪಾಯಿ ಹಣದ ಲೆಕ್ಕವನ್ನು ಮಗ ನೀಡಿರಲಿಲ್ಲ. ಕೇಳಿದರೆ ಲೆಕ್ಕ ಕೊಡಲ್ಲ. ಲೆಕ್ಕ ಕೊಟ್ಟರೂ ಸಾಯಿಸುತ್ತೀಯಾ ಕೊಡದಿದ್ದರೂ ಸಾಯಿಸ್ತೀಯಾ ಹೇಳಲ್ಲ ಎಂದಿದ್ದನಂತೆ ಮಗ. ಇದೇ ವಿಚಾರವಾಗಿ ತಂದೆ-ಮಗನ ನಡುವೆ ಗಲಾಟೆ ನಡೆದಿದ್ದು, ಕೋಪದ ಬರದಲ್ಲಿ ಮಗನ ಮೇಲೆ ಥಿನ್ನರ್ ಎರಚಿ ಬೆಂಕಿ ಹಚ್ಚಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಅರ್ಪಿತ್ ನನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಅರ್ಪಿತ್ ಸಾವನ್ನಪ್ಪಿದ್ದಾನೆ.
ಲವ್ ಜಿಹಾದ್ ಆರೋಪಕ್ಕೆ ಬಿಗ್ ಟ್ವಿಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ