ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮೂರು ದಿನಗಳ ಹಿಂದೆ ಮಂಗಳೂರಿನ ಮಾರ್ಗನ್ಸ್ ಗೇಟ್ ಬಳಿ ತಂದೆಯೇ ಮಗನ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.
14 ವರ್ಷದ ಸುಧೀಂದ್ರ ಪ್ರಭು ಮೃತ ಬಾಲಕ. ವೇತನ ವಿಚಾರವಾಗಿ ಕೆಲಸದ ಸಿಬ್ಬಂದಿಗಳು ಮಾಲೀಕ ರಾಜೇಶ್ ಪ್ರಭು ಜೊತೆ ಜಗಳವಾಡುತ್ತಿದ್ದರು. ಈ ವೇಳೆ ರಾಜೇಶ್ ಪ್ರಭು ಕೈಯಲ್ಲಿದ್ದ ರಿವಾಲ್ವರ್ ನಿಂದ ಅಚಾನಕ್ ಆಗಿ ಹಾರಿದ ಗುಂಡು ಅವರ ಮಗ ಸುಧೀಂದ್ರ ತಲೆಗೆ ತಗುಲಿತ್ತು.
ತಕ್ಷಣ ಬಾಲಕ ಸುಧೀಂದ್ರನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾನೆ.
ಕೆಲಸದಾಳಿಗೆ ಹೊಡೆದ ಗುಂಡು ಮಗನ ತಲೆಗೆ ಬಡಿಯಿತು!
ದಿಢೀರ್ ದೆಹಲಿ ಪ್ರವಾಸ ಕೈಗೊಂಡ ಸಿಎಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ