ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೋವಿಡ್ ಸಾಂಕ್ರಾಮಿಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದ ಅಪಾಯಕಾರಿ ಸನ್ನಿವೇಶದಲ್ಲೂ ತಮ್ಮ ಜೀವದ ಹಂಗು ತೊರೆದು ಕೊರೊನಾ ವಾರಿಯರ್ ಗಳು ಜನಾರೋಗ್ಯ ಕಾಪಾಡಲು ವಹಿಸಿದ ಪಾತ್ರ ಸದಾ ಸ್ಮರಣೀಯವಾದುದು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಕೆಎಲ್ ಇ ಸಂಸ್ಥೆಯ ಜೆಎನ್ ಎಂಸಿ ಆಡಿಟೋರಿಯಂನಲ್ಲಿ ರಾಜು ಪವಾರ ಡ್ಯಾನ್ಸ್ ಅಕ್ಯಾಡೆಮಿ ವತಿಯಿಂದ ಆಯೋಜಿಸಿದ್ದ ಕೊರೋನಾ ವಾರಿಯರ್ ಗಳಿಗೆ ಸತ್ಕರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೋವಿಡ್-19 ಸಮಯದಲ್ಲಿ ತಮ್ಮ ಜೀವದ ಹಂಗನ್ನೇ ತೊರೆದು ಕೊರೋನಾ ಸೋಂಕಿತರನ್ನು ರಕ್ಷಿಸಿ, ಅವರ ಸೇವೆಯಲ್ಲಿ ನಿರತರಾದ ಎಲ್ಲ ವಾರಿಯರ್ ಗಳ ಸೇವೆಗಳನ್ನು ಪರಿಗಣಿಸಿ, ರಾಜು ಪವಾರ ಡ್ಯಾನ್ಸ್ ಅಕ್ಯಾಡೆಮಿ ವತಿಯಿಂದ ಸತ್ಕರಿಸಲಾಯಿತು.
ನಂತರ ಬಾಹು ಕದಂ ಹಾಗೂ ಭರತ್ ಗಣೇಶಪುರೆ ಅವರ ವತಿಯಿಂದ ಹಾಸ್ಯ ಕಾರ್ಯಕ್ರಮ ಜರುಗಿತು. ಜೀವನದಲ್ಲಿ ನಗುವಿದ್ದರೆ ಉತ್ತಮ ಆರೋಗ್ಯವನ್ನು ನಮ್ಮದಾಗಿಸಬಹುದು ಎನ್ನುವುದು ಹಾಸ್ಯಭರಿತ ಕಾರ್ಯಕ್ರಮದ ಉದ್ದೇಶವಾಗಿತ್ತು.
ಈ ಸಮಯದಲ್ಲಿ ಡಾ. ಬಿಜ್ಜರಗಿ, ರಾಜಶ್ರೀ ಅನಿಗೊಳ, ಲಾತ್ಕರ್, ಡಾ. ವಿಜಯ ದೇಸಾಯಿ, ಹಲವಾರು ಕೊರೋನಾ ವಾರಿಯರ್ ಗಳು ಉಪಸ್ಥಿತರಿದ್ದರು.
ಸಲಿಂಗಕಾಮಿಯಿಂದ ಬ್ಲ್ಯಾಕ್ ಮೇಲ್; ಕಾನೂನು ವಿದ್ಯಾರ್ಥಿಯನ್ನು ಹತ್ಯೆಗೈದು ಚರಂಡಿಗೆ ಬಿಸಾಕಿದ ಸ್ನೇಹಿತರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ