ಪ್ರಗತಿವಾಹಿನಿ ಸುದ್ದಿ, ಖಾನಾಪುರ: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಸಾಧಿಸಬೇಕು ಎಂದು ಬಿಜೆಪಿ ಧುರೀಣೆ ಡಾ. ಸೋನಾಲಿ ಸರ್ನೋಬತ ಹೇಳಿದರು.
ಅವರು ತಾಲೂಕಿನ ಬೀಡಿ ಗ್ರಾಮದ ಎನ್ ಎಂ ಕ್ಯಾಂಪಸ್ ಪಿಯುಸಿ ಕಾಲೇಜು ಮತ್ತು ಶಾಲೆಯ 8-9-10 ನೇ ಮತ್ತು ಪಿಯುಸಿ ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳ
ಸ್ವಾಗತ ಮತ್ತು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ತಮ್ಮ ಟ್ರಸ್ಟ್ ವತಿಯಿಂದ ಕೈಗೊಳ್ಳಲಾಗುತ್ತಿರುವ ಮಹಿಳಾ ಸಬಲೀಕರಣ ಮತ್ತು ಯುವ ಪ್ರೇರಣೆಯ ಅಡಿ ಕಾರ್ಯಗಳ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸಂಜನಾ ಕಟ್ಘರ್ – ಶೇ. 96, ರೇಷ್ಮಾ ಮಕಾಂದರ್ – ಶೇ.91, ಮೇಘಾ ಹೊಸಟ್ಟಿ- ಶೇ. 88, ಎಸ್ ಎಸ್ ಎಲ್ ಸಿ ಪಿಯುಸಿ ಐಐನ ಲೀಲಾವತಿ ಚೌಗ್ಗಡಿ ಶೇ.89, ಮಂಗಲ್ ದೇಮೆನಕೊಪ್ಪ ಶೇ.88, ದೇಮಕ್ಕ ಬಾಬ್ಡಕರ್ ಶೇ.81, ಸಿದ್ಧಪ್ಪ ವಾತಣ್ಣನವರ್ ಶೇ.79 ಸೇರಿದಂತೆ ಪ್ರತಿಭಾನ್ವಿತ ಏಳು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪ್ರಾಚಾರ್ಯ ಎಂ.ಎಂ.ಪಾಟೀಲ ಸ್ವಾಗತಿಸಿದರು. ಅಧ್ಯಕ್ಷ ಎಂ.ಎಂ.ಬೀಡಿಕರ್, ಕಾರ್ಯದರ್ಶಿ ಗಣು ಕುಲಕರ್ಣಿ, ನಿರ್ದೇಶಕ ರಾಜೇಂದ್ರ ತಿಮ್ಮೋಲಿ, ಡಾ. ಬಾಪಾಹೇಟ್, ಎಂ.ಎಂ.ದಫ್ತದಾರ, ದತ್ತಾರಾಮ ಪಾಟೀಲ, ಪ್ರಾಚಾರ್ಯ ಎಲ್.ಪಿ.ಪಾಟೀಲ, ಬಸವರಾಜ ಕಡೇಮನಿ, ಬಾಳೇಶ ಚವ್ವಣ್ಣವರ, ಜ್ಯೋತಿಬಾ ಭೆಂಡಿಗೇರಿ, ನಾಗೇಶ ರಾಮಾಜಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನೇಸರಗಿ: ಅಕ್ರಮ ಸಾಗಾಟವಾಗುತ್ತಿದ್ದ ಪಡಿತರ ಅಕ್ಕಿ ವಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ