Kannada NewsKarnataka News
2 ಚಿನ್ನದ ಪದಕ ಗೆದ್ದ ಶೀತಲ್ ಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಈಚೆಗೆ ಹೈದರಾಬಾದ್ ನಲ್ಲಿ ನಡೆದ 8ನೇ ಎಐಟಿಡಬ್ಲ್ಯೂಪಿಎಫ್ ರಾಷ್ಟ್ರೀಯ ಸಾಂಪ್ರದಾಯಿಕ ಕುಸ್ತಿ ಮತ್ತು 2019ರ ಪ್ಯಾಂಕ್ರೇಶನ್ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಿ 2 ಚಿನ್ನದ ಪದಕ ಗೆದ್ದ ಶೀತಲ್ ಪಾಟೀಲ್ ಅವರನ್ನು ಸೋಮವಾರ ಸತ್ಕರಿಸಲಾಯಿತು.
ಬೆಳಗಾವಿಯ ಟಿವಿ ಸೆಂಟರ್ ನಿವಾಸಿಯಾಗಿರುವ ಶೀತಲ್ ಪಾಟೀಲ ಅವರನ್ನು ಅಲ್ಲಿನ ರಹವಾಸಿಗಳು ಸನ್ಮಾನಿಸಿ ಆರ್ತಿಕ ನೆರವು ನೀಡಿದರು. ಮಾಜಿ ಶಾಸಕ ಎಸ್.ಸಿ.ಮಾಳಗಿ 10 ಸವಿರ ರೂ. ಹಾಗೂ ಮಾಜಿ ನಗರ ಸೇವಕಿ ಅನುಶ್ರೀ ದೇಶಪಾಂಡೆ 5 ಸಾವಿರ ರೂ. ನೀಡಿ ಸನ್ಮಾನಿಸಿದರು.
ಪ್ರತಿಭಾವಂತೆಯಾಗಿರುವ ಶೀತಲ್ ಬಡತನದಿಂದ ಬಂದಿದ್ದು ಆಕೆ ಮುಂದೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಎಲ್ಲರೂ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಬೇಕು ಎಂದು ಅನುಶ್ರೀ ದೇಶಪಾಂಡೆ ಕೋರಿದರು.
ಟಿವಿ ಸೆಂಟರ್ ನ ಕೆಲವು ನಿವಾಸಿಗಳು ತಮ್ಮ ಕೈಲಾದಷ್ಟು ನೆರವು ನೀಡಿ, ಪ್ರೋತ್ಸಾಹಿಸಿದರು. ನಿಲಿಮಾ ಪಾವಶೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.



