Belagavi NewsBelgaum NewsKannada NewsKarnataka NewsNationalPolitics

*ಪಂಚಮಸಾಲಿ ಮೀಸಲಾತಿ ನಿರ್ಲಕ್ಷ್ಯ ಮಾಡಿದರೆ ಬೆಳಗಾವಿ ಅಧಿವೇಶನದಲ್ಲಿ ಉಗ್ರ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿ ಪ್ರಥಮ ಬಾರಿಗೆ  ಲಿಂಗಾಯತ ಪಂಚಮಸಾಲಿ ವಕೀಲರ ರಾಜ್ಯ ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು. 

ಪಂಚಮಸಾಲಿ ವಕೀಲರ ರಾಜ್ಯ ಸಭೆಯ ನಿರ್ಣಯಗಳು

ಸರ್ಕಾರ ಕೂಡಲೇ ಕಾನೂನು ಸಭೆ ಕರೆದು ತಿಂಗಳೊಳಗೆ ಪಂಚಮಸಾಲಿ 2 A ಹಾಗೂ ಲಿಂಗಾಯತ ObC ಬಗ್ಗೆ ಸ್ಪಷ್ಟನೆ ನೀಡಬೇಕು. ಕಾನೂನು ಅಡತಡೆ ನಿವಾರಿಸಿ ಮೀಸಲಾತಿ ಘೋಷಣೆ ಮಾಡಬೇಕು. ರಾಜ್ಯ ಜಿಲ್ಲಾ ತಾಲೂಕು ಮಟ್ಟದಲ್ಲಿ ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ( L P A P) ಹೆಸರಿನಲ್ಲಿ ನೂತನ ಸಂಘಟನೆಯನ್ನು ಸ್ಥಾಪಿಸಲು ನಿರ್ಣಯ ಕೈಗೊಳ್ಳಲಾಯಿತು. 

11 ಜನರ ಕಾನೂನು ತಜ್ಞರ ಉನ್ನತ ಸಮಿತಿಯನ್ನು ರಚಿಸಿ ಅವರ ಮಾರ್ಗದರ್ಶನ ಪಡೆಯಲು ತೀರ್ಮಾನಿಸಲಾಯಿತು. ಸಭೆಯ ನಂತರ ಶಾಸಕರ ಭವನದಿಂದ ವಿಧಾನ ಸೌಧ ವರೆಗೆ ಬೃಹತ್ ಪ್ರತಿಭಟನೆ ಮಾಡಲಾಯಿತು.

ರಾಜ್ಯಪಾಲ ತಾವರಚಂದ್ ಗೆಹಲೋಟ ಭೇಟಿ

ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಇದುವರೆಗೂ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ ಸರ್ಕಾರಕ್ಕೆ ಹಾಗೂ ಅಧಿವೇಶನದಲ್ಲಿ ಮೀಸಲಾತಿ ಬಗ್ಗೆ ಚರ್ಚೆಗೆ ಅವಕಾಶ ನೀಡದ ವಿಧಾನಸಭಾ ಅಧ್ಯಕ್ಷರಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯಪಾಲರನ್ನು ಭೇಟಿ ಮಾಡುವ ನಿರ್ಧಾರ ತೆಗೆದುಕೊಂಡ ತಕ್ಷಣ ತಾವರಚಂದ್ ಗೆಹಲೋಟ ರನ್ನು ಭೇಟಿ ಮಾಡಿ ಮೀಸಲಾತಿ ಬಗ್ಗೆ ಮುಖ್ಯಮಂತ್ರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಲಾಯಿತು. 

ಈ ಸಂದರ್ಭದಲ್ಲಿ ರಾಜ್ಯ ಪಂಚಸಂಚಾಲಕರಾಗಿ  ಹುಬ್ಬಳ್ಳಿಯ ಹನುಮಂತ ಶಿಗ್ಗಾವಿ , ಬೆಳಗಾವಿಯ   ವಿಜಯ ಪಾಟೀಲ್ , ಧಾರವಾಡದ ವಿದ್ಯಾ ಪಾಟೀಲ್ , ಬೆಂಗಳೂರು ಶಿವಶಂಕರ್ ಪಾಟಲ್ , ಕೊಪ್ಪಳದ ರಾಜಶೇಖರ ನಿಂಗೊಜಿ ಇವರನ್ನು ನೇಮಕ ಮಾಡಲಾಯಿತು.

ಶಾಸಕರಾದ ರಾಜು ಕಾಗೆ ಮಾಜಿ ಶಾಸಕರಾದ ಡಾ ವಿಶ್ವನಾಥ್ ಪಾಟೀಲ್ , ನಂದಿಹಳ್ಳಿ ಹಾಲಪ್ಪ , ನಿಂಗಪ್ಪ ಫಿರೋಜಿ , ಶಿವಾನಂದ ತಬಾಕೆ , ಪ್ರೊ vh ಬಿರಾದಾರ , ನಿಂಗಪ್ಪ ಚಳಗೇರಿ , ರಾಜೇಶ್ವರಿ ಪಾಟೀಲ್ , ಕಾರ್ಟಗಿ ಪಂಪನಗೌಡ ಮೊದಲಾದ ಪ್ರಮುಖರು ಇದ್ದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ , ಧಾರವಾಡ , ಶಿವಮೊಗ್ಗ , ಬೆಳಗಾವಿ , ಬೆಂಗಳೂರು , ಹಾವೇರಿ , ಕೊಪ್ಪಳ , ವಿಜಯಪುರ , ಬಾಗಲಕೋಟೆ ಜಿಲ್ಲೆಗಳ ಪ್ರಮುಖ ವಕೀಲರು ಭಾಗವಹಿಸಿ ಸುಧೀರ್ಘ ಚರ್ಚೆ ಮಾಡಿದರು.

ಬೆಂಗಳೂರು ಪಂಚಮಸಾಲಿ ಜಿಲ್ಲಾ ಘಟಕದ ಆನಂದ ಗೌಡ ಬಿರಾದಾರ , ಪುಟ್ಟರಾಜು ಹಳ್ಳದ , ಕಾಂತೇಶ್ ರೇವಡಿಹಲ್ , ಶಂಭು ಪಟೇಲ್ ,  ಹಾಗೂ ಪಂಚಸೇನಾ ರುದ್ರಗೌಡ ರಾಜ್ಯ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button