ಆಸ್ಪತ್ರೆಯಲ್ಲೇ ಕಡತ ವಿಲೇವಾರಿ; ವೆಂಟಿಲೇಟರ್ ಬೆಡ್ ಹೆಚ್ಚಳಕ್ಕೆ ಸಿಎಂ ಸಭೆ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಸೋಂಕಿನಿಂದಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಅಲ್ಲಿಯೇ ಕಡತಗಳನ್ನು ವಿಲೇವಾರಿ ಮಾಡಿದರು.
ಅನಾರೋಗ್ಯದ ಮಧ್ಯೆಯೂ ಸುಮ್ಮನೆ ಕೂಡ್ರದೆ ಕೆಲಸಗಳನ್ನು ನಿರ್ವಹಿಸುತ್ತಲೇ ಇದ್ದರು.
ಇದೇ ವೇಳೆ, ರಾಜ್ಯದಲ್ಲಿ ವೆಂಟಿಲೇಟರ್ ಬೆಡ್ ಗಳನ್ನು ಹೆಚ್ಚಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಅಧಿಕಾರಿಗಳೊಂದಿಗೆ ದೂರವಾಣಿ ಮುಖಾಂತರ ಸಭೆ ನಡೆಸಿದರು.
ಸಭೆಯ ಮುಖ್ಯಾಂಶಗಳು:
1. ಭಾರತ ಸರ್ಕಾರದ ಪಿ.ಎಂ.ಕೇರ್ಸ್ ಅಡಿಯಲ್ಲಿ ರಾಜ್ಯಕ್ಕೆ  681 ವೆಂಟಿಲೇಟರ್ ಗಳು ದೊರಕಿವೆ.
2. ಕಳೆದ ವಾರದಲ್ಲಿ ಬೆಂಗಳೂರಿನಲ್ಲಿ 166 ಸೇರಿದಂತೆ ರಾಜ್ಯದಲ್ಲಿ ವೆಂಟಿಲೇಟರ್ ಬೆಡ್ ಗಳ ಸಂಖ್ಯೆಯನ್ನು ಒಟ್ಟು 335ಕ್ಕೆ   ಹೆಚ್ಚಿಸಲಾಗಿದೆ.
3. ಇದೆ ವಾರಾಂತ್ಯದಲ್ಲಿ ಉಳಿದ 346 ವೆಂಟಿಲೇಟರ್ ಗಳನ್ನು ಅಳವಡಿಸಲಾಗುವುದು.
4. ಕೇಂದ್ರ ಸರ್ಕಾರ ರಾಜ್ಯಕ್ಕೆ ಒದಗಿಸಿರುವ 1279 ವೆಂಟಿಲೇಟರ್ ಗಳನ್ನು ಈ ಮಾಹೆಯ ಅಂತ್ಯದಲ್ಲಿ  ದೊರಕಲಿವೆ.
5. ಈ ಎಲ್ಲಾ ವೆಂಟಿಲೇಟರ್ ಗಳನ್ನು ತಕ್ಷಣವೇ  ಅಳವಡಿಸುವಂತೆ ಮುಖ್ಯ ಮಂತ್ರಿಗಳು ಸೂಚಿಸಿದರು.
6. ಆಸ್ಪತ್ರೆಯ ಸಿಬ್ಬಂದಿ ಈ ವೆಂಟಿಲೇಟರ್ ಗಳನ್ನು ಬಳಸಬೇಕು.
7. ಅನೆಸ್ಥಿಟಿಕ್ಸ್, ಪಾರಾ ಮೆಡಿಕಲ್ ಸಿಬ್ಬಂದಿಗಳನ್ನು ತಕ್ಷಣವೇ  ನೇಮಕ ಮಾಡಿಕೊಳ್ಳುವಂತೆ ಸೂಚಿಸಿದರು.
8.ವೆಂಟಿಲೇಟರ್ ಗಳನ್ನು ಒದಗಿಸಲು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಮಾಡಿರುವ ಮನವಿಯನ್ನು  ಪರಿಗಣಿಸುವಂತೆ ಸೂಚಿಸಿದ ಮುಖ್ಯಮಂತ್ರಿಗಳು, ಕೋವಿಡ್ 19 ಸಂಬಂಧ  ತಾತ್ಕಾಲಿಕವಾಗಿ ಒದಗಿಸಲು ಷರತ್ತು ಮತ್ತು ನಿಯಮಗಳ ಬಗ್ಗೆ ತೀರ್ಮಾನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button