ಪ್ರಗತಿವಾಹಿನಿ ಸುದ್ದಿ, ಮುಂಬೈ: ‘ಭಜರಂಗಿ ಭಾಯಿಜಾನ್ -2 ಚಿತ್ರ 2015ರ ಸಲ್ಮಾನ್ ಖಾನ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ “ಭಜರಂಗಿ ಭಾಯಿಜಾನ್’ ನ ಮುಂದುವರಿದ ಭಾಗ ಎಂದು ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್ ಹೇಳಿಕೊಂಡಿದ್ದಾರೆ.
ಕಬೀರ್ ಖಾನ್ ನಿರ್ದೇಶನದ ಮೊದಲ ಭಾಗದ ಚಿತ್ರ ಬಿಡುಗಡೆ 7ನೇ ವರ್ಷ ಪೂರೈಸಿದ ಸಂದರ್ಭದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಎರಡನೇ ಭಾಗದ ಕಥೆ ಮೊದಲ ಭಾಗಕ್ಕಿಂತ 10 ವರ್ಷಗಳಷ್ಟು ನಂತರದ ಕಥೆಗೆ ಜಿಗಿದಿದೆ ಎಂದಿದ್ದಾರೆ.
ಭಜರಂಗಿ ಭಾಯಿಜಾನ್-2ನೇ ಭಾಗದ ಪರಿಕಲ್ಪನೆ ಈಗಾಗಲೇ ನಿರ್ಧಾರಗೊಂಡಿದೆ. ಈ ಕಥೆಯನ್ನು ಈಗಾಗಲೇ ಈ ಕಥೆಯ ಸಾರಾಂಶವನ್ನು ಸಲ್ಮಾನ್ ಗೆ ವಿವರಿಸಿದ್ದು ಅವರು ಅದನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಚೆಂಡು ಸಲ್ಮಾನ್ ಕೋರ್ಟ್ ನಲ್ಲಿದ್ದು ಅವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ವಿಜಯೇಂದ್ರ ಪ್ರಸಾದ ಹೇಳಿದ್ದಾರೆ.
ಈ ಭಾಗಕ್ಕೆ ಸಲ್ಮಾನ್ ‘ಪವನಪುತ್ರ ಭಾಯಿಜಾನ್’ ಎಂದು ಕರೆದಿದ್ದಾರೆ. ಎರಡನೇ ಭಾಗ ಮೊದಲ ಭಾಗಕ್ಕಿಂತ ಯಾವುದಕ್ಕೂ ಕಮ್ಮಿಯಿರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಭಜರಂಗಿ ಭಾಯಿಜಾನ್ ಕಥೆ ಮೊಳಕೆಯೊಡೆದಿದ್ದು ಚಿರಂಜೀವಿ ನಟನೆಯ “ಪಸಿವಾಡಿ ಪ್ರಣಾಮ’ ಎಂಬ ತೆಲುಗು ಚಿತ್ರದಿಂದ. ಅದನ್ನು ನಾನು ತುಂಬ ಮೆಚ್ಚಿಕೊಂಡಿದ್ದೇನೆ. ನನ್ನ ಸಹವರ್ತಿಯೊಬ್ಬರು ಪಾಕಿಸ್ತಾನದಿಂದ ಬರುವ ಆತಂಕದ ಬಗ್ಗೆ ಚಿತ್ರ ಮಾಡಲು ಹೇಳಿದ್ದರು. ಅದರಲ್ಲಿ ನಾಯಕ ಭಜರಂಗಿಯ ಭಕ್ತನಾಗಿರುತ್ತಾನೆ ಎಂದು ಅದರ ಪರಿಕಲ್ಪನೆಯ ಸಾರಾಂಶ ವಿವರಿಸಿದ್ದರು. ಆದರೆ ಎರಡು ದೇಶಗಳ ಮಧ್ಯೆ ದ್ವೇಷ ಹೆಚ್ಚಿಸುವುದಕ್ಕಿಂತ ತಗ್ಗಿಸುವ ವಿಚಾರ ನನ್ನದಾಗಿತ್ತು” ಎಂದು ವಿಜಯೇಂದ್ರ ಪ್ರಸಾದ ಹೇಳಿಕೊಂಡಿದ್ದಾರೆ.
ವಿದ್ಯಾರ್ಥಿನಿ ಆತ್ಮಹತ್ಯೆ; ಇಬ್ಬರು ಶಿಕ್ಷಕಿಯರ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ