NationalPolitics

*ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ : ಉದ್ಯಮಿ ವಿಜಯ್ ಟಾಟಾ ಅವರು ನೀಡಿದ ದೂರಿನಡಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಇದೀಗ ಸುಲಿಗೆ ಹಾಗೂ ಜೀವ ಬೆದರಿಕೆ ಆರೋಪದಡಿ FIR ದಾಖಲಾಗಿದೆ.

ಇದಲ್ಲದೇ ಜೆಡಿಎಸ್‌ನ ಮಾಜಿ ಪರಿಷತ್ ಸದಸ್ಯ ರಮೇಶ್ ಗೌಡ ಅವರ ವಿರುದ್ಧವೂ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇಂದು ಬೆಳಗ್ಗೆ ಅಮೃತಹಳ್ಳಿ ಪೊಲೀಸರು ಎನ್‌ಸಿಆ‌ರ್ ದಾಖಲಿಸಿದ್ದು, ಇದೀಗ ಕೋರ್ಟ್ ಅನುಮತಿ ಪಡೆದು 308, 351 ಸೆಕ್ಷನ್ ಅಡಿ ಈ ಇಬ್ಬರ ವಿರುದ್ಧ ಎಫ್‌ಐಆ‌ರ್ ದಾಖಲಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು 50 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದರು ಎಂದು ವಿಜಯ್ ಟಾಟಾ ಆರೋಪಿಸಿದ್ದರು.

ಜೆಡಿಎಸ್‌ ಮುಖಂಡ ರಮೇಶ್ ಗೌಡ ಮನೆಗೆ ಬಂದು, ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದ ಉಪ ಚುನಾವಣೆ ನಿಲ್ಲುತ್ತಿದ್ದಾರೆ ಎಂದಿದ್ದರು. ಅದೇ ಸಂದರ್ಭದಲ್ಲಿ ಕುಮಾರಸ್ವಾಮಿ ಕೂಡ ಕಾಲ್ ಮಾಡಿ ಎಲೆಕ್ಷನ್‌ಗಾಗಿ 50 ಕೋಟಿ ರೂಪಾಯಿ ಹಣ ಕೊಡಿ. ಇಲ್ಲದಿದ್ದರೆ ನಿಮ್ಮ ಪ್ರಾಜೆಕ್ಟ್ ಕಂಪ್ಲೀಟ್ ಮಾಡುವುದಕ್ಕೆ ಬಿಡಲ್ಲ ಎಂದು ಬೆದರಿಕೆ ಹಾಕಿದ್ದರು ಎಂಬುವುದು ಟಾಟಾ ಅವರ ಆರೋಪ. ಇದಲ್ಲದೇ ದೇವಸ್ಥಾನ ಕಟ್ಟಲು ರಮೇಶ್ ಗೌಡ ಸಹ 5 ಕೋಟಿ ರೂಪಾಯಿಯನ್ನು ಕೇಳಿದ್ದಾಗಿಯೂ ಟಾಟಾ ಗಂಭೀರ ಆರೋಪ ಮಾಡಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button