
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರವಾಸಿ ವೀಸಾದ ಮೇಲೆ ಆಗಮಿಸಿ ಧರ್ಮ ಪ್ರಚಾರದಲ್ಲಿ ತೊಡಗಿದ್ದ ಇಂಡೋನೇಷ್ಯಾ ಮೂಲದ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ನಿಜಾಮುದ್ದೀನ್ ಧರ್ಮ ಸಭೆಯ ನಂತರ 10 ಜನ ಇಂಡೋನೇಷ್ಯಾ ಪ್ರಜೆಗಳು ತಮ್ಮ ದೇಶಕ್ಕೆ ವಾಪಸ್ ಹೋಗಲಾಗದೆ ಬೆಳಗಾವಿಗೆ ಆಗಮಿಸಿ ಉಳಿದುಕೊಂಡಿದ್ದರು. ಇವರೆಲ್ಲ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬಂದವರು.
ಪ್ರವಾಸಿ ವೀಸಾ ಪಡೆದು ಬೆಳಗಾವಿಗೆ ಬಂದಿದ್ದೇ ಅಕ್ರಮ, ಜೊತೆಗೆ ಧರ್ಮ ಪ್ರಚಾರ ಮಾಡುವುದೂ ತಪ್ಪು. ಇಲ್ಲಿ ಅಕ್ರಮವಾಗಿ ನೆಲೆಸಿ, ಸಧ್ಯ ಕ್ವಾರಂಟೈನ್ ಮೇಲಿದ್ದಾರೆ. ಇವರ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಲ್ಲದೆ ವೀಸಾಗಳನ್ನು ರದ್ದುಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ