Kannada NewsKarnataka NewsLatest
ಸಂಕೇಶ್ವರ: ಆಕಸ್ಮಿಕ ಅಗ್ನಿ ಅವಘಡ: ಎರಡು ಅಂಗಡಿಗಳು ಭಸ್ಮ

ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ: ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಪಎರಡು ಅಂಗಡಿಗಳು ಸುಟ್ಟುಹೋಗಿದ್ದು ಲಕ್ಷಾಂತರ ರೂ. ಹಾನಿ ಸಂಭವಿಸಿದೆ.
ನೆಹರು ರಸ್ತೆಯಲ್ಲಿರುವ ಕಿರಾಣಿ ಅಂಗಡಿಯಲ್ಲಿ ಪಟಾಕಿ ಕೂಡ ಇತ್ತೆನ್ನಲಾಗಿದೆ. ಈ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ ಭುಗಿಲೆದ್ದು ಪಕ್ಕದ ಕಾಳುಕಡಿ ಮಾರಾಟದ ಅಂಗಡಿಗೂ ಆವರಿಸಿದ ಪರಿಣಾಮ ಎರಡೂ ಅಂಗಡಿಗಳಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಇನ್ನೂ ಹೆಚ್ಚಿನ ಅವಘಡ ತಪ್ಪಿಸಿದ್ದಾರೆ.
ಕಪಿಲಾ ನದಿಯಲ್ಲಿ ಈಜಲು ಜಿಗಿದ ಹುಡುಗರು; ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಯುವಕ


