
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ಗೋವಾವೇಸ್ ಮರಾಠಾ ಮಂದಿರದಲ್ಲಿ ‘ಶಗುನ್’ ಆಯೋಜಿಸಿದ್ದ ವೀವರ್ಸ್ ವರ್ಕರ್ಸ್ ಪ್ರದರ್ಶನಕ್ಕೆೆ ಬೆಳಗಾವಿಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಪ್ರದರ್ಶನದಲ್ಲಿ ವಿಶೇಷ ಸಂದರ್ಭಕ್ಕಾಗಿ ಬನಾರಸಿ ಶಾಲುಗಳು ಹಾಗೂ ದೇಶದ ವಿವಿಧ ಭಾಗಗಳಿಂದ ಎಲ್ಲಾ ರೀತಿಯ ವಿಶೇಷ ಅಲಂಕಾರಿಕ, ರೇಷ್ಮೆೆ, ಸಿಲ್ಕ್ ಹಾಗೂ ಪ್ರಿಂಟೆಡ್ ಸೀರೆಗಳು ಮತ್ತು ಡ್ರೆೆಸ್ ಮಟೀರಿಯಲ್ಸ್ ಪ್ರದರ್ಶನಕ್ಕಿಡಲಾಗಿದೆ.
ಇದಲ್ಲದೇ, ಬೆಡ್ ಶೀಟ್‌ಗಳು, ಬೆಡ್ ಕವರ್, ಪಿಲ್ಲೋ ಕವರ್ ಮತ್ತು ಮುತ್ತಿನ ಆಭರಣಗಳು, ಬಳೆಗಳು ಹಾಗೂ ಗಾಜಿನ ನಗರವೆಂದು ಪ್ರಸಿದ್ಧವಾದ ಫಿರೋಜಾಬಾದ್ ಬಳೆಗಳನ್ನು ಕೂಡ ಇಡಲಾಗಿದೆ. ಮಹಿಳೆಯರ ಪಾದರಕ್ಷೆಗಳ ಉತ್ಪಾದನೆಯಲ್ಲಿ ಪ್ರಮುಖವಾಗಿರುವ ಪಂಜಾಬದಲ್ಲಿ ತಯಾರಿಸಿದ ‘ಮೊಜರಿ ಜೂತೆ’ ಮಹಿಳೆಯರ ಗಮನ ಸೆಳೆಯುತ್ತಿವೆ. ಗ್ರಾಹಕರು ಶೇ50 ರ ವರೆಗಿನ ರಿಯಾಯಿತಿಯ ಲಾಭವನ್ನು ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.