
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಶನಿವಾರ ಕೂಟದಲ್ಲಿ ಇರುವ ಮಹಿಳಾ ಅಘಡಿ ಹೋಟನಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಇಂದು ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ತಕ್ಷಣ ಸಿಬ್ಬಂದಿ ಎಚ್ಚೆತ್ತು ಹೋಟಲ್ ನ ಸಿಲೆಂಡರ್ ಹೊರಕ್ಕೆ ತಂದಿದ್ದಾರೆ. ಮೇನ್ ಸ್ವಿಚ್ ಆಫ್ ಮಾಡಿ ಕರೆಂಟ್ ಕನೆಕ್ಷನ್ ಬಂದ್ ಮಾಡಿದ್ದಾರೆ. ಸಿಬ್ಬಂದಿ ಚಾಣಾಕ್ಷತನದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




