Belagavi NewsBelgaum NewsKannada NewsKarnataka News

*ಬಗ್ಯಾಸ್ ಸಾಗಿಸುತ್ತಿದ್ದ ಲಾರಿಗೆ ಬೆಂಕಿ: ಐದು ಲಕ್ಷ ಹಾನಿ*

ಪ್ರಗತಿವಾಹಿನಿ ಸುದ್ದಿ: ಬಗ್ಯಾಸ್ ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಬೆಂಕಿ ತಗುಲಿದ್ದರಿಂದ ಸುಮಾರು 5 ಲಕ್ಷ ಹಾನಿಯಾಗಿರುವ ಘಟನೆ ಚಿಕ್ಕೋಡಿಯ ಬೋರಗಾಂವ- ಕಸನಾಳ ರಸ್ತೆ ಮಾರ್ಗದ ಮಧ್ಯೆ ಸಂಭವಿಸಿದೆ.

ಕೊಲ್ಹಾಪುರದ ಸಾಗರ ಸಾಳುಂಕೆ ಎಂಬುವರ ಮಾಲಿಕತ್ವದ ಲಾರಿ ಶಿರೋಳ ದತ್ತ ಕಾರ್ಖಾನೆಯಿಂದ ಬಗ್ಯಾಸ್‌ ಹೊತ್ತುಕೊಂಡು ಫೈವ್ ಸ್ಟಾರ್ ಎಂಐಡಿಸಿ ಕಾಗಲ ಕಡೆಗೆ ಹೋಗುತ್ತಿತ್ತು. ಲಾರಿಯು ಕಸನಾಳ ಗ್ರಾಮ ಸಮೀಪಿಸುತ್ತಿದ್ದಾಗ ಚಾಲಕನ ಕ್ಯಾಬಿನ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. 

ಲಾರಿ ಕ್ಯಾಬಿನ್ ಬೆಂಕಿಗೆ ಆಹುತಿಯಾಗಿರುವುದನ್ನು ಅರಿತ ಚಾಲಕ ದತ್ತಾತ್ರೇಯ ಕದಮ್ ಲಾರಿಯಿಂದ ಹೊರಗೆ ಜಿಗಿದರು. ಬೆಂಕಿ ಬೇಗನೆ ಇಡೀ ಕ್ಯಾಬಿನ್ ಹಾಗೂ ಬಗ್ಯಾಸ್ ಹರಡಿತು.

ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ತಕ್ಷಣ ಜವಾಹರ ಹುಪರಿ ಮತ್ತು ಸದಲಗಾ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. 

ವೈರಿಂಗ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ನಿಯಂತ್ರಿಸಲು ಸದಲಗಾ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಶ್ರಮಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button