Kannada NewsLatest

*ಉಗ್ರರಿಗೆ ನೇರವಾಗುತ್ತಿದ್ದ ಯುವಕ ಸೇನೆಯಿಂದ ತಪ್ಪಿಸಿಕೊಳ್ಳಲು ಹೋಗಿ ನದಿಗೆ ಹಾರಿ ಸಾವು*

ಪ್ರಗತಿವಾಹಿನಿ ಸುದ್ದಿ: ಪಹಲ್ಗಾಮ ದಾಳಿ ಬಳಿಕ ಭಾರತೀಯ ಸೇನೆಯ ಕಾರ್ಯಾಚರಣೆ ತೀವ್ರಗೊಳಿಸಿದೆ.‌ ಉಗ್ರರ ಅಟ್ಟಹಾಸ ಅಡಗಿಸಲು ಎಲ್ಲಾ ರೀತಿಯ ಕಾರ್ಯಾಚರಣೆ ನಡೆಸಲಾಗುತ್ತಿದೆ. ಉಗ್ರರಿಗೆ ನೆರವಾಗುವ ಸ್ಥಳೀಯ ಕಶ್ಮೀರಿ ಜನರನ್ನು ಕೂಡಾ ಪತ್ತೆ ಹಚ್ಚುವಾಗ ಉಗ್ರರಿಗೆ ಸಹಾಯ ಮಾಡುತ್ತಿದ್ದ ಯುವಕ ಸೇನೆಯಿಂದ ತಪ್ಪಿಸಿಕೊಳ್ಳಲು ಹೋಗಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ.

ಯುವಕನೊಬ್ಬ ಉಗ್ರರಿಗೆ ಆಹಾರ ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವಾಗ ಸಿಕ್ಕಿಬಿದ್ದಿದ್ದು, ಸೇನೆ ಬೆನ್ನಟ್ಟುತ್ತಿದ್ದಂತೆಯೇ ಆತ ನದಿಗೆ ಹಾರಿದ್ದಾನೆ.

ಇಡಿ ಕಾರ್ಯಾಚರಣೆಯ ದೃಶ್ಯ ಡ್ರೋನ್ ಕೆಮೆರಾದಲ್ಲಿ ಸೆರೆಯಾಗಿದೆ. ಮೃತ ಯುವಕನನ್ನು ಇಮ್ಮಿಯಾಜ್ ಅಮಹ್ಮದ್ ಮಾಗರೇ ಎಂದು ಗುರುತಿಸಲಾಗಿದೆ.

22 ವರ್ಷದ ಈತ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಪ್ರಾಣಬಿಟ್ಟಿದ್ದಾನೆ. ಸ್ಥಳೀಯ ಯುವಕನಾದ ಇಮ್ಮಿಯಾಜ್ ಉಗ್ರರ ಪತ್ತೆಯಲ್ಲಿ ಸೇನೆಗೆ ನೆರವಾಗುವುದಾಗಿ ಹೇಳಿದ್ದ, ಸೈನಿಕರ ಪರವಾಗಿ ಭೂಗತವಾಗಿ ಕಾರ್ಯವೆಸಗುವ ಸೋಗು ಧರಿಸಿ ಗುಪ್ತವಾಗಿ ಭಯೋತ್ಪಾದಕರಿಗೆ ನೆರವಾಗುತ್ತಿದ್ದ ಈತನ ಸುಳಿವು ಹಿಡಿದು ಸೇನೆ ಬೆನ್ನು ಹತ್ತಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button